ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಕೊರೊನ ಸೋಂಕಿರುವುದು ದೃಢಪಟ್ಟಿದೆ ಎಂದು ಅವರ ಕಚೇರಿ ತಿಳಿಸಿದೆ.
ಪ್ರಸ್ತುತ ಹೈದರಾಬಾದ್ ನಲ್ಲಿರುವ ನಾಯ್ಡು ಒಂದು ವಾರ ಸ್ವಯಂಪ್ರೇರಿತವಾಗಿ ಪ್ರತ್ಯಕವಾಗಿರಲು ನಿರ್ಧರಿಸಿದ್ದಾರೆ.
ಉಪರಾಷ್ಟ್ರಪತಿಗಳ ಸಚಿವಾಲಯದ ಅಧಿಕೃತ ಟ್ವಿಟರ್ ಪ್ರಕಾರ ಅವರು ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರು ಪ್ರತ್ಯೇಕವಾಗಿರಲು ಮತ್ತು ಪರೀಕ್ಷೆಗೆ ಒಳಪಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಬಂದರು ನಗರಕ್ಕೆ ಮೂರು ದಿನಗಳ ಭೇಟಿಗಾಗಿ ಬಂದಿದ್ದ ಅವರು ಜನವರಿ 21 ರಂದು ವಿಶಾಖಪಟ್ಟಣ ಇಂದ ಹೈದರಾಬಾದ್ ಗೆ ಆಗಮಿಸಿದ್ದಾರೆ.
ನಾಯ್ಡು ಅವರು ಜನವರಿ 19ರಂದು ವಿಜಯವಾಡದಿಂದ ವಿಶೇಷ ರೈಲಿನ ಮೂಲಕ ವಿಶಾಖಪಟ್ಟಣಂ ತಲುಪಿದ್ದರು. ಜನವರಿ 20ರಂದು ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿಯ 73 ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು.
ಮರುದಿನ ಅವರು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಮತ್ತು ಎನರ್ಜಿಯ ಮೊದಲ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅದೇ ದಿನ ಹೈದರಾಬಾದ್ ಗೆ ಬಂದರು.
ಅವರು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಂಗಿದ್ದು ಭಾನುವಾರ ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.


