ಭಾರತೀಯ ಆರ್ಥಿಕತೆಯು ಗಾಢ ಕಲೆಗಳಿಂದ ಕೂಡಿದ್ದು ಅದರ ವೆಚ್ಚವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಗೌರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಕೊರೊನ ಸಾಂಕ್ರಾಮಿಕದಿಂದ ಭಾರತೀಯ ಆರ್ಥಿಕತೆ ಹಾನಿಗೊಳಗಾಗಿದೆ. ಹೀಗಾಗಿ ಕೆ-ಆಕಾರದ ಚೇತರಿಕೆಯನ್ನು ತಡೆಯಲು ಸರ್ಕಾರ ಕಠಿಣ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.
ಕೆ-ಆಕಾರದ ಚೇತರಿಕೆಯು ಸಾಂಕ್ರಾಮಿಕ ರೋಗದಿಂದ ಸಣ್ಣ ವ್ಯವಹಾರ, ಕೈಗಾರಿಕೆಗಳಿಗಿಂತ ತಂತ್ರಜ್ಞಾನ ಮತ್ತು ದೊಡ್ಡಬಂಡವಾಳ ಸಂಸ್ಥೆಗಳು ಹೆಚ್ಚು ವೇಗವಾಗಿ ಚೇರಿಸಿಕೊಳ್ಳುವ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಮಧ್ಯಮ ವರ್ಗ, ಸಣ್ಣ ಮತ್ತು ಮಧ್ಯಮ ವಲಯ ಹಾಗು ನಮ್ಮ ಮಕ್ಕಳ ಮನಸ್ಸಿಗೆ ಈಗಿನ ಆರ್ಥಿಕತೆಯಿಂದ ತೊಂದರೆಯಾಗಿದೆ. ಇದರ ಒಂದು ಲಕ್ಷಣವೆಂದರೆ ದುರ್ಬಲ ಬಳಕೆಯ ಬೆಳವಣಿಗೆ, ವಿಶೇಷವಾಗಿ ಸಾಮೂಹಿಕ ಬಳಕೆಯ ಸರಕುಗಳಿಗೆ ಮೇಲೆ ಆಗಿದೆ ಎಂದು ರಘುರಾಮ್ ರಾಜನ್ ಪಿಟಿಐಗೆ ನೀಡಿರುವ ಸಂದರ್ಶನವನ್ನು ಇಂಡಿಯನ್ ಎಕ್ಸ್ ಪ್ರಸ್ ವರದಿ ಮಾಡಿದೆ.
ಕಪ್ಪು ಕಲೆಗಳು ನಿರುದ್ಯೋಗದ ಪ್ರಮಾಣ ಮತ್ತು ಕಡಿಮೆ ಕೊಳ್ಳುವ ಶಕ್ತಿಯನ್ನು ತೋರಿಸುತ್ತದೆ. ವಿಶೇಷವಾಗಿ ಕೆಳಮಧ್ಯಮ ವರ್ಗದವರಲ್ಲಿ ಆರ್ಥಿಕ ಒತ್ತಡವನ್ನು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಸ್ಥೆಗಳು ಅನುಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ಕೆ-ಆಕಾರದ ಆರ್ಥಿಕ ಚೇತರಿಕೆಯ ಸಾಧ್ಯತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೆ-ಆಕಾರದ ಚೇತರಿಕೆ ತಡೆಗಟ್ಟಲು ನಾವು ಸಾಕಷ್ಟು ಪ್ರಯತ್ನಗಳನ್ನು ಹಾಕಬೇಕು. ಇದರಿಂದ ಮಧ್ಯಮ ಅವಧಿಯ ಬೆಳವಣಿಗೆಯ ಸಾಮರ್ಥ್ಯವನ್ನು ಕಡಿಮೆಗೊಳಿಸಬಹುದು ಎಂದು ಹೇಳಿದ್ದಾರೆ.