ಮಿನಿವ್ಯಾನ್ ವೊಂದಕ್ಕೆ ಜೋಡಿಸಲಾದ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 7 ಮಂದಿ ನಾಗರಿಕರು ಮೃತಪಟ್ಟಿರುವ ಘಟನೆ ಆಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಸಂಭವಿಸಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈವರೆಗೆ ಸ್ಫೋಟದ ಹೊಣೆಗಾರಿಕೆಯನ್ನು ಯಾರೂ ಒಪ್ಪಿಕೊಂಡಿಲ್ಲ. ಆದರೆ ತಾಲಿಬಾನ್ ನಾಯಕರ ವಿರುದ್ಧ ಇಸ್ಲಾಮಿಕ್ ಸ್ಟೇಟ್ ನಿರಂತರ ನಡೆಸುತ್ತಿರುವ ದಾಳಿಯ ಭಾಗವಾಗಿರಬಹುದು ಎಂದು ಶಂಕಿಸಲಾಗಿದೆ.
ಬಾಂಬ್ ದಾಳಿಯು ಹೆರಾತ್ ನಲ್ಲಿ ನಡೆದ ಮೊದಲ ದಾಳಿಯಾಗಿದೆ. ದಾಳಿ ಸಂಬಂಧ ತನಿಖೆ ಮುಂದುವರಿದಿದೆ ಎಂದು ಸ್ಥಳೀಯ ತಾಲಿಬಾನ್ ಅಧಿಕಾರಿ ನಯೀಮುಲ್ಲಾಕ್ ಹಕ್ಕಾನಿ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ತಾಲಿಬಾನ್ ಗುಪ್ತಚರ ಸದಸ್ಯರು ಎಂದು ಹೇಳಿಕೊಂಡಿರುವ ಕನಿಷ್ಠ ಹತ್ತು ಮಂದಿ ಶಸ್ತ್ರಸಜ್ಜಿತರು ಕಾಬೂಲ್ ನಲ್ಲಿ ಅಪಾರ್ಟ್ ಮೆಂಟ್ಗೆ ನುಗ್ಗಿ ತಮನಾ ಜರಿಯಾಬ್ ಪರಿಯಾನಿ ಮತ್ತು ಅವರ ಮೂವರು ಸಹೋದರಿಯರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಮಹಿಳಾ ಹಕ್ಕುಗಳ ಕಾರ್ಯಕರ್ತರು ಅವರನ್ನು ಕರೆದೊಯ್ಯುವ ಸ್ವಲ್ಪ ಸಮಯದ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅವರು ಭಯಭೀತರಾಗಿದ್ದಾರೆ, ಉಸಿರುಗಟ್ಟಿಸುತ್ತಿದ್ದಾರೆ ಮತ್ತು ಸಹಾಯಕ್ಕಾಗಿ ಕಿರುಚುತ್ತಿದ್ದಾರೆ. ತಾಲಿಬಾನ್ ತನ್ನ ಬಾಗಿಲನ್ನು ಬಡಿಯುತ್ತಿದೆ ಎಂದು ಅವರು ಹೇಳಿದರು.