ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಭೌತಿಕ ರ್ಯಾಲಿಗಳ ಮೇಲಿನ ನಿಷೇಧವನ್ನು ಜನವರಿ 31ರ ವರೆಗೆ ವಿಸ್ತರಿಸಿದ್ದು ಅಲ್ಲಿಯವರೆಗೆ ರೋಡ್ ಶೋಗಳನ್ನು ನಿಷೇಧಿಸಲಾಗಿದೆ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ.
ಮನೆ-ಮನೆ ಪ್ರಚಾರಕ್ಕೆ 5 ವ್ಯಕ್ತಿಗಳ ಮಿತಿ ಇದ್ದುದನ್ನು 10 ವ್ಯಕ್ತಿಗಳು ಪ್ರಚಾರದಲ್ಲಿ ತೊಡಗಿಕೊಳ್ಳಬಹುದು ಎಂದು ಆಯೋಗ ಹೇಳಿದೆ.
ಕೊವಿಡ್ ನಿರ್ಬಂಧಗಳೊಂದಿಗೆ ಗೊತ್ತುಪಡಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರಕ್ಕಾಗಿ ವಿಡಿಯೋ ವ್ಯಾಸ್ ಗಳನ್ನು ಅನುಮತಿಸಲಾಗಿದೆ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಚುನಾವಣಾ ಆಯೋಗ ಕೊರೊನ ವೈರಸ್ ಹರಡುವುದನ್ನು ತಡೆಗಟ್ಟಲು ಭೌತಿಕ ರ್ಯಾಲಿಗಳು ಮತ್ತು ರೋಡ್ ಶೋಗಳ ಮೇಲೆ ವಿಧಿಸಿರುವ ನಿಷೇಧವನ್ನು ಮುಂದುವರಿಸಬೇಕೆ ಎಂದು ನಿರ್ಧರಿಸಲು ಶನಿವಾರ ವರ್ಚುವಲ್ ಸಭೆಗಳನ್ನು ನಡೆಸಿ ರ್ಯಾಲಿಗಳಿಗೆ ನಿಷೇಧ ಮುಂದುವರೆಸಿದೆ.
ಜನವರಿ 8 ರಂದು ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರದಲ್ಲಿ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಚುನಾವಣ ಸಮಿತಿಯು ಜನವರಿ 15ರವರೆಗೆ ಭೌತಿಕ ರ್ಯಾಲಿಗಳು, ರಸ್ತೆ ಮತ್ತು ಬೈಕ್ ಶೋಗಳು ಮತ್ತು ಪ್ರಚಾರ ಮಾಡುವುದನ್ನು ನಿಷೇಧಿಸಿದೆ.
ಇದು ರಾಜಕೀಯ ಪಕ್ಷಗಳಿಗೆ ಗರಿಷ್ಠ 300 ಜನರು ಅಥವಾ ಸಭಾಂಗಣ ಸಾಮರ್ಥ್ಯದ ಶೇ.50ರಷ್ಟು ಒಳಾಂಗಣ ಸಭೆಗಳನ್ನು ನಡೆಸಲು ಸಡಿಲಿಕೆ ಮಾಡಲಾಗಿದೆ.