Monday, September 16, 2024
Google search engine
Homeಇತರೆಮನೆ ಕೊಡುವಂತೆ ಆಗ್ರಹಿಸಿ ಹೈಟೆನ್ಷನ್ ಕಂಬ ಏರಿದ ವ್ಯಕ್ತಿ - ಸ್ಧಳಕ್ಕೆ ಬಂದ ತಹಶೀಲ್ದಾರ್

ಮನೆ ಕೊಡುವಂತೆ ಆಗ್ರಹಿಸಿ ಹೈಟೆನ್ಷನ್ ಕಂಬ ಏರಿದ ವ್ಯಕ್ತಿ – ಸ್ಧಳಕ್ಕೆ ಬಂದ ತಹಶೀಲ್ದಾರ್

ಬೆಳಗ್ಗೆ 10 ಗಂಟೆಗೆ ಗ್ರಾಮದ ಸಮೀಪವೇ ಹಾದುಹೋಗಿರುವ ಹೈಟೆನ್ಷನ್ ಕಂಬವನ್ನು ಏರಿದ ಶ್ರೀನಿವಾಸ್ ನನಗೆ ಮನೆ ನೀಡಬೇಕು. ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮತ್ತು ಸರ್ಕಾರದ ವಿರುದ್ದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ವ್ಯಕ್ತಿಯೊಬ್ಬ ಮನೆ ನೀಡುವಂತೆ ಆಗ್ರಹಿಸಿ ಹೈ ಟೆನ್ಷನ್ ಕಂಬ ಏರಿ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಳಗ್ಗೆ 10 ಗಂಟೆಗೆ ಗ್ರಾಮದ ಸಮೀಪವೇ ಹಾದುಹೋಗಿರುವ ಹೈಟೆನ್ಷನ್ ಕಂಬವನ್ನು ಏರಿದ ಶ್ರೀನಿವಾಸ್ ನನಗೆ ಮನೆ ನೀಡಬೇಕು. ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮತ್ತು ಸರ್ಕಾರದ ವಿರುದ್ದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

ಸುಮಾರು 45 ನಿಮಷಕ್ಕೂ ಹೆಚ್ಚು ಕಾಲ ಹೈಟೆನ್ಷನ್ ಕಂಬದ ಅರ್ಧ ಭಾಗದಲ್ಲಿ ಕುಳಿತು ನನಗೆ ಮನೆ ನೀಡಬೇಕು. ಗುಬ್ಬಿ ತಹಶೀಲ್ದಾರ್ ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದಿದ್ದಾರೆ.

ಶ್ರೀನಿವಾಸ್ ಹೈಟೆನ್ಷನ್ ಕಂಬದ ಮೇಲೆ ಕುಳಿತಿರುವುದನ್ನು ನೋಡಲು ಹೊಸಹಳ್ಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ಕುತೂಹಲದಿಂದ ವೀಕ್ಷಿಸಿದರು. ಕೆಲವರು ಕೆಳಗೆ ಇಳಿಯುವಂತೆ ಮಾಡಿದ ಮನವಿಗೆ ಶ್ರೀನಿವಾಸ್ ಕಿಮ್ಮತ್ತು ನೀಡಲಿಲ್ಲ.

ವ್ಯಕ್ತಿ ಹೈಟೆನ್ಷನ್ ಕಂಬ ಏರಿ ಕುಳಿತಿರುವ ವಿಷಯವನ್ನು ತಿಳಿದ ತಹಶೀಲ್ದಾರ್ ಆರತಿ, ಸಿಪಿಐ ನದಾಫ್ ಸ್ಥಳಕ್ಕೆ ಬಂದು ವ್ಯಕ್ತಿಯ ಮನವೊಲಿಸಿದರು. ಅಧಿಕಾರಿಗಳಿಂದ ಸಕಾರಾತ್ಮಕ ಭರವಸೆ ಸಿಕ್ಕಿದ ನಂತರ ಶ್ರೀನಿವಾಸ್ ಕೆಳಗೆ ಇಳಿದರು.

ಶ್ರೀನಿವಾಸ್ ಹೈಟೆನ್ಷನ್ ಕಂಬ ಏರಿರುವುದನ್ನು ನೂರಾರು ಮಂದಿ ಕುತೂಹಲದಿಂದ ವೀಕ್ಷಿಸಿದರು. ಅಧಿಕಾರಿಗಳ ಮಧ್ಯ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular