Friday, November 22, 2024
Google search engine
Homeಮುಖಪುಟಕಥಕ್ ದಂತಕಥೆ ಪಂಡಿತ್ ಬಿರ್ಜು ಮಹರಾಜ್ ಇನ್ನಿಲ್ಲ

ಕಥಕ್ ದಂತಕಥೆ ಪಂಡಿತ್ ಬಿರ್ಜು ಮಹರಾಜ್ ಇನ್ನಿಲ್ಲ

ಕಥಕ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿರ್ಜು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಕಥಕ್ ನೃತ್ಯದಲ್ಲಿ ದೇಶ-ವಿದೇಶಗಳಲ್ಲೂ ಹೆಸರು ಗಳಿಸಿದ್ದ ಪಂಡಿತ್ ಬಿರ್ಜು ಮಹಾರಾಜ್ ದೆಹಲಿಯ ತನ್ನ ನಿವಾಸದಲ್ಲಿ ಭಾನುವಾರ ತಡರಾತ್ರಿ ನಿಧನರಾಗಿದ್ದು ಅವರಿಗೆ 83 ವರ್ಷ ವಯಸ್ಸಾಗಿತ್ತು.

ವರದಿಗಳ ಪ್ರಕಾರ ಭಾನುವಾರ ತಡರಾತ್ರಿ ‘ಬಿರ್ಜು ತಮ್ಮ ಮೊಮ್ಮಗನೊಂದಿಗೆ ಆಟವಾಡುತ್ತಿದ್ದರು. ಆಗ ಅವರ ಆರೋಗ್ಯದಲ್ಲಿ ಏರುಪೇರಾಗಿ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ನಂತರ ಬಿರ್ಜು ಸಾವನ್ನಪ್ಪಿರುವ ಬಗ್ಗೆ ಘೋಷಿಸಲಾಯಿತು ಎಂದು ತಿಳಿಸಿವೆ.

ಬಿರ್ಜು ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ರಾತ್ರಿ 12.15 ರಿಂದ 12.30ರ ಸಮಯದಲ್ಲಿ ದಿಢೀರನೆ ಉಸಿರಾಟದ ತೊಂದರೆ ಉಂಟಾಯಿತು. ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋದೆವು. ಆದರೆ ಅವರು ಉಳಿಯಲಿಲ್ಲ ಎಂದು ಮೊಮ್ಮಗಳು ರಜಿನಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.

ಕಥಕ್ ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿರ್ಜು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಬಿರ್ಜು ಮಹಾರಾಜ್ ನೃತ್ಯ ಕಲಾವಿದರ ಕುಟುಂಬದಿಂದ ಬಂದವರು. ಚಿಕ್ಕಪ್ಪ ಶಂಭ ಮಹಾರಾಜ್, ಲಚ್ಚ ಮಹಾರಾಜ್, ಬಿರ್ಜು ತಂದೆ ಮತ್ತು ಗುರು ಎಲ್ಲರೂ ಒಂದೇ ಕುಟುಂಬದವರಾಗಿದ್ದಾರೆಂಬುದು ವಿಶೇಷ.

ಬಿರ್ಜು ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಕಥಕ್ ನೃತ್ಯವನ್ನು ಹೇಳಿಕೊಟ್ಟಿದ್ದಾರೆ. ಅವರ ಸಾಧನೆಯನ್ನು ಪರಿಗಣಿಸಿ ಭಾರತ ಸರ್ಕಾರ ದೇಶದ ಎರಡನೇ ಅತ್ಯುನ್ನತ ಪದ್ಮವಿಭೂಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಹಲವು ಪ್ರಶಸ್ತಿಗಳು ಬಿರ್ಜು ಅವರನ್ನು ಹುಡುಕಿಕೊಂಡು ಬಂದಿವೆ. ಕಾಳೀದಾಸ ಸನ್ಮಾನ್, ಗೌರವ ಡಾಕ್ಟರೇಟ್ ಪದವಿ, 2002ರಲ್ಲಿ ಲತಾ ಮಂಗೇಶ್ಕರ್ ಪ್ರಶಸ್ತಿ, ಭಾರತ್ ಮುನಿ ಸನ್ಮಾನ್, ಉತ್ತಮ ಕೊರಿಯೋಗ್ರಫಿಗಾಗಿ ಎರಡು ಬಾರಿ ಫಿಲ್ಮಂಫೇರ್ ಪ್ರಶಸ್ತಿ, ಕೊರಿಯೋಗ್ರಾಫ್ ಪ್ರಶಸ್ತಿ ಲಭಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular