ಯಾವುದೇ ವ್ಯಕ್ತಿಯ ಒಪ್ಪಿಗೆಯನ್ನು ಪಡೆಯದೆ ಯಾವುದೇ ಕಾರಣಕ್ಕೂ ಬಲವಂತದ ಲಸಿಕೆಯನ್ನು ಹಾಕುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಹೇಳಿಕೆ ನೀಡಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ನಾಗರಿಕರು ಲಸಿಕೆ ಪಡೆಯಬೇಕು ಎಂದು ಜಾಹೀರಾತು ನೀಡಿ ಸಲಹೆ ಮತ್ತು ಸಂವಹನ ನೀಡಲಾಗಿದೆ. ಆದರೂ ಯಾವುದೇ ವ್ಯಕ್ತಿಗೆ ತನ್ನ ಆಶಯಗಳಿಗೆ ವಿರುದ್ಧವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ಉತ್ತರಿಸಿದೆ.
ದೇಶದಲ್ಲಿ ಯಾವುದೇ ವ್ಯಕ್ತಿಗೂ ಒತ್ತಾಯಪೂರ್ವಕವಾಗಿ ಕೊವಿಡ್ ಲಸಿಕೆಯನ್ನು ನೀಡುತ್ತಿಲ್ಲ. ಅಂತಹ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ಮತ್ತು ಆರೋಗ್ಯ ಸಚಿವಾಲಯ ಹೊರಡಿಸಿಲ್ಲ ಎಂದು ಪ್ರಜಾವಾಣಿ ವೆಬ್ ಸೈಟ್ ನಲ್ಲಿ ವರದಿ ಮಾಡಿದೆ.
ವಿಕಲಚೇತನರಿಗೆ ಮನೆ-ಮನೆಗೆ ಹೋಗಿ ಆದ್ಯತೆ ಮೇಲೆ ಕೊವಿಡ್ ಲಸಿಕೆ ಹಾಕಲಾಗುತ್ತಿದೆ. ಇದನ್ನು ಪ್ರಶ್ನಿಸಿ ಎವಾರಾ ಫೌಂಡೇಶನ್ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ನೀಡಿದ ಉತ್ತರದಲ್ಲಿ ಹೇಳಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ವಿಕಲಚೇತನ ವ್ಯಕ್ತಿಗಳು ಯಾವುದೇ ಉದ್ದೇಶಕ್ಕಾಗಿ ಲಸಿಕೆ ಪ್ರಮಾಣಪತ್ರಗಳನ್ನು ಕೊಂಡೊಯ್ಯಲು ಅಗತ್ಯವಿರುವ ಯಾವುದೇ ಎಸ್ಒಪಿ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಗೆ ತಿಳಿಸಿದೆ.
ಅಡ್ವೊಕೇಟ್ ಶಶಾಂಕ್ ಸಿಂಗ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ನಿರ್ದಿಷ್ಟ ಲಸಿಕೆ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ನಿಗದಿಪಡಿಸುವುದು ಹೆಚ್ಚು ತಾಂತ್ರಿಕ ಪ್ರಕ್ರಿಯೆಯಾಗಿದೆ. ಪರಿಣಾಮ ವಿಕಲಚೇತನರು ಲಸಿಕೆ ಹಾಕುವಲ್ಲಿ ತೊಂದರೆ ಎದುರಿಸು ತ್ತಿದ್ದಾರೆ ಎಂದು ಹೇಳಿದರು.