ಗಾನಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಕೊರೊನ ಸೋಂಕು ದೃಢಪಟ್ಟಿದ್ದು ಮುಂಬೈನ ಬ್ರೀಚ್ ಕೆನಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಸೋಂಕಿ ತಗುಲಿದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನ ಸೋಂಕಿನ ಜೊತೆಗೆ ಲತಾ ಮಂಗೇಶ್ಕರ್ ನ್ಯೂಮೋನಿಯಾದಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏಳು ದಶಕದಿಂದ ಭಾರತೀಯ ಸಂಗೀತ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಲತಾ ಮಂಗೇಶ್ಕರ್ ಭಾರತೀಯ ಸಂಗೀತ ಇತಿಹಾಸದಲ್ಲಿ ಹಲವು ಕಾರಣಗಳಿಗಾಗಿ ಯುವಪೀಳಿಗೆ ಮನಸ್ಸನ್ನು ಸೆಳೆದಿದ್ದಾರೆ.
1949ರಲ್ಲಿ ವಹಲ್ ಚಿತ್ರದ ಮೂಲಕ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿದ ಲತಾ ಮಂಗೇಶ್ಕರ್ 1974ರಲ್ಲಿ ತನ್ನ ಸಿರಿಕಂಠದಿಂದ ಗಿನ್ನಿಸ್ ದಾಖಲೆಗಳ ಪುಟ ಸೇರಿದ್ದಾರೆ.
ಏಕಾಂಗಿ, ಯುಗಳ ಮತ್ತು ಹಿನ್ನೆಲೆ ಗಾಯಕಿಯಾಗಿ 25 ಸಾವಿರ ಹಾಡುಗಳನ್ನು ಹಾಡಿದ್ದಾರೆ. 1948 ರಿಂದ 1974ರವರೆಗೆ ದೇಶದ 20 ಭಾಷೆಗಳ ಚಿತ್ರಗಳಿಗೆ ಹಿನ್ನೆಲೆ ಗಾಯಕಿಯಾಗಿ ದನಿ ನೀಡಿದ್ದಾರೆ.
ಭಾರತದ ಗಾನಕೋಗಿಲೆ ಎಂದು ಪ್ರಸಿದ್ದಿ ಹೊಂದಿರುವ ಆಶಾ ಬೋಂಸ್ಲೆ, ಲತಾ ಅವರ ಸಹೋದರಿಯಾಗಿ ಕುಟುಂಬ ಸಂಗೀತ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಗಣನೀಯ ಸಾಧನೆ ಮಾಡಿದೆ.