ಬಿಜೆಪಿಯ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಸಂಘ ಪರಿವಾರ ಧಿಮಾಕಿನಿಂದ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಭಾಷಣಗಳಲ್ಲಿ ಹಿಂದೂ-ಮುಸ್ಲಿಂ ಮತ್ತು ಶಂಸಾನ್ ಕಬ್ರಿಸ್ತಾನ ಹೇಳಿಕೆಗಳ ಮೂಲಕ ಸಮಾಜವನ್ನು ವಿಭಜಿಸುವ ಉಲ್ಲೆಖಗಲಿಂದ ತುಂಬಿವೆ ಎಂದು ತಿಳಿಸಿದರು.
ಸಂಘ ಪರಿವಾರದ ವಿರುದ್ಧ ಟೀಕಾ ಪ್ರಹಾರ ಮಾಡಿದ, ದಿಗ್ವಿಜಯ ಸಿಂಗ್, ಇದು ಗೃಹೋಪಯೋಗಿ ವಸ್ತುಗಳನ್ನು ಮೌನವಾಗಿ ಹಾನಿ ಮಾಡುವ ಧಿಮಾಕ್ ನಂತೆ ಕಲೆ ಮಾಡುವಂತೆ ಕರೆ ನೀಡಿದರು.
ಹಿಂದೂ-ಮುಸ್ಲೀಂ, ಹಿಂದೂಸ್ತಾನ್- ಪಾಕಿಸ್ತಾನ್ ಅಥವಾ ಶಂಶಾನ್ ಕಬ್ರಿಸ್ತಾನ್ ಹೊರತುಪಡಿಸಿ ಬೇರೆ ಪದಗುಚ್ಚಗಳನ್ನು ನೀವು ಕೇಳಿದ್ದೀರ. ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಸುಳ್ಳ ಹಡಲು ಸುಳ್ಳು ಕಥೆಯನ್ನು ಸೃಷ್ಟಿಸಲಾಗುತ್ತಿದೆ ಎಂದು ಸಿಂಗ್ ಆರೋಪಿಸಿದ್ಧಾರೆ.
ಫ್ಯಾಸಿಸ್ಟ್ ಸಿದ್ದಾಂತವನ್ನು ಮುಂದಕ್ಕೆ ಕೊಂಡೊಯ್ಯಲು ಮತ್ತು ರಾಜಕೀಯ ಪೋಸ್ಟ್ ಮೂಲಕ ಹಣ ಸಂಪಾದಿಸಲು ಈ ರೀತಿ ಮಾಡಲಾಗಿದೆ ಎಂದು ಆರೋಪಿಸಿದರು.
ಮುಸ್ಲಿಮರು ಮತ್ತು ಕ್ರಿಶ್ಚಿಯನ್ ಬ್ರಿಟಿಷರ ಆಳ್ವಿಕೆಯಲ್ಲಿ ನೂರು ವರ್ಷಗಳ ಕಾಲ ಹಿಂದೂ ಧರ್ಮವು ಎಂದಿಗೂ ಅಪಾಯ ಎದುರಿಸಲಿಲ್ಲ ಎಂದು ಸಿಂಗ್ ಹೇಳಿದರು.