Friday, November 22, 2024
Google search engine
Homeಮುಖಪುಟಮೌನ ದ್ವೇಷದ ದನಿಗಳಿಗೆ ಧೈರ್ಯ ತುಂಬುತ್ತದೆ - ಪ್ರಧಾನಿಗೆ ಬೆಂಗಳೂರು, ಅಹಮದಾಬಾದ್ ಐಐಎಂ ಅಧ್ಯಾಪಕರು, ವಿದ್ಯಾರ್ಥಿಗಳ...

ಮೌನ ದ್ವೇಷದ ದನಿಗಳಿಗೆ ಧೈರ್ಯ ತುಂಬುತ್ತದೆ – ಪ್ರಧಾನಿಗೆ ಬೆಂಗಳೂರು, ಅಹಮದಾಬಾದ್ ಐಐಎಂ ಅಧ್ಯಾಪಕರು, ವಿದ್ಯಾರ್ಥಿಗಳ ಪತ್ರ

ಒಂದು ರಾಷ್ಟ್ರವಾಗಿ ನಮ್ಮ ಜನರ ವಿರುದ್ಧ ದ್ವೇಷ ಹುಟ್ಟುಹಾಕದಂತೆ ಆತಂಕಗೊಂಡಿರುವ ನಮ್ಮ ಮನಸ್ಸುಗಳಿಗೆ ಸಾಂತ್ವನ ಹೇಳುವಂತ ನಾಯಕತ್ವವನ್ನು ಕೇಳುತ್ತೇವೆ. ಸಮಾಜ ಸೃಜನಶೀಲತೆ, ನಾವೀನ್ಯತೆ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸಬಹುದು ಅಥವಾ ಸಮಾಜ ತನ್ನೊಳಗೆ ವಿಭಜನೆಯನ್ನು ರಚಿಸಬಹುದಾಗಿದೆ ಎಂದು ನಾವು ನಂಬುತ್ತೇವೆ.

ಬೆಂಗಳೂರು ಮತ್ತು ಅಹಮದಾಬಾದ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ದ್ವೇಷ ಭಾಷಣ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಮೌನ ವಹಿಸಿರುವುದು ದ್ವೇಷದ ದನಿಗಳಿಗೆ ಮತ್ತಷ್ಟು ಧೈರ್ಯ ತುಂಬುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ.

ಪ್ರಧಾನಿ ಕಚೇರಿಗೆ ಮೇಲ್ ಮಾಡಲಾದ ಪತ್ರದಲ್ಲಿ ಐಐಎಂ ಬೆಂಗಳೂರಿನ 13 ಅಧ್ಯಾಪಕರು ಮತ್ತು ಐಐಎಂ ಅಹಮದಾಬಾದ್ ನ ಮೂವರು ಸೇರಿ 183 ಮಂದಿ ಸಹಿಹಾಕಿರುವ ಪತ್ರವನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಗೌರವಾನ್ವಿತ ಪ್ರಧಾನಮಂತ್ರಿಗಳೇ ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ನಿಮ್ಮ ಮೌನವು ನಮ್ಮ ದೇಶದ ಬಹುಸಂಸ್ಕೃತಿ ಧಾರೆಗಳನ್ನು ಗೌರವಿಸುವ ನಮ್ಮೆಲ್ಲರಿಗೂ ನಿರಾಶಾದಾಯಕವಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳೇ ನಿಮ್ಮ ಮೌನವು ದ್ವೇಷದ ದನಿಗಳಿಗೆ ಧೈರ್ಯ ತುಂಬುತ್ತದೆ. ನಮ್ಮ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತದೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳಿಂದ ದೇಶವನ್ನು ದೂರವಿರಿಸಬೇಕೆಂದು ಪ್ರಧಾನಿಯನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನ ಐಐಎಂ ಐವರು ಅಧ್ಯಾಪಕರು ಪತ್ರ ಬರೆದಿದ್ದು, ಕಾರ್ಯತಂತ್ರದ ಸಹಾಯಕ ಪ್ರಾಧ್ಯಾಪಕ ಪ್ರತೀಕ್ ರಾಜ್, ಸಾರ್ವಜನಿಕ ನೀತಿಯ ಸಹ ಪ್ರಾಧ್ಯಾಪಕ ದೀಪಕ್ ಮಾಲ್ಘಾನ್, ಉದ್ಯಮಶೀಲತೆ ಸಹ ಪ್ರಾಧ್ಯಾಪಕ ದಾಲ್ಚಿಯಾ ಮಣಿ, ನಿರ್ಧಾರ ವಿಜ್ಞಾನದ ಸಹ ಪ್ರಾಧ್ಯಾಪಕ ರಾಜಲಕ್ಷ್ಮಿ ವಿ ಮೂರ್ತಿ, ಸಾರ್ವಜನಿಕ ನೀತಿಯ ಸಹ ಪ್ರಾಧ್ಯಾಪಕ ಹೇಮಾ ಸ್ವಾಮಿನಾಥನ್ ಮತ್ತು ಪರಿಸರ ಅರ್ಥಶಾಸ್ತ್ರಜ್ಞ ಮಾಲ್ಘಾನ್ ಪ್ರಮುಖರಾಗಿದ್ದಾರೆ.

ಮೌನ ಮುಂದಿನ ಆಯ್ಕೆಯಾಗಿಲ್ಲ ಎಂದು ಅರಿತುಕೊಂಡ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಗುಂಪು ಪತ್ರ ಬರೆಯಲು ನಿರ್ಧರಿಸಿತು ಎಂದು ರಾಜ್ ಹೇಳಿದರು.

ದ್ವೇಷದ ದನಿಗಲು ಜೋರಾಗಿದ್ದರೆ, ಕಾರಣದ ದನಿಗಳು ಗಟ್ಟಿಯಾಗಿರಬೇಕು ಎಂಬ ಅಂಶವನ್ನು ಒತ್ತಿಹೇಳುವುದು ಸಹಿದಾರರ ಉದ್ದೇಶವಾಗಿದೆ ಎಂದು ರಾಜ್ ತಿಳಿಸಿದರು.

ನಮ್ಮ ಸಂವಿಧಾನ ನಮ್ಮ ಧರ್ಮವನ್ನು ಭಯ, ನಾಚಿಕೆ ಇಲ್ಲದೆ ಘನತೆಯಿಂದ ಆಚರಿಸುವ ಹಕ್ಕನ್ನು ನೀಡಿದೆ. ನಮ್ಮ ದೇಶದಲ್ಲಿ ಈಗ ಭಯದ ಭಾವನೆ ಇದೆ. ಚರ್ಚ್, ಪೂಜಾ ಸ್ಥಳಗಳನ್ನು ಧ್ವಂಸ ಮಾಡಲಾಗುತ್ತಿದೆ. ಮುಸ್ಲಿಮ ಸಹೋದರ-ಸಹೋದರಿಯರ ವಿರುದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದೆ. ಈ ಎಲ್ಲ ಪ್ರಕ್ರಿಯೆಗಳು ಯಾವುದೇ ಭಯವಿಲ್ಲದೆ ನಡೆಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಂದು ರಾಷ್ಟ್ರವಾಗಿ ನಮ್ಮ ಜನರ ವಿರುದ್ಧ ದ್ವೇಷ ಹುಟ್ಟುಹಾಕದಂತೆ ಆತಂಕಗೊಂಡಿರುವ ನಮ್ಮ ಮನಸ್ಸುಗಳಿಗೆ ಸಾಂತ್ವನ ಹೇಳುವಂತ ನಾಯಕತ್ವವನ್ನು ಕೇಳುತ್ತೇವೆ. ಸಮಾಜ ಸೃಜನಶೀಲತೆ, ನಾವೀನ್ಯತೆ ಮತ್ತು ಬೆಳವಣಿಗೆಯ ಮೇಲೆ ಕೇಂದ್ರೀಕರಿಸಬಹುದು ಅಥವಾ ಸಮಾಜ ತನ್ನೊಳಗೆ ವಿಭಜನೆಯನ್ನು ರಚಿಸಬಹುದಾಗಿದೆ ಎಂದು ನಾವು ನಂಬುತ್ತೇವೆ.

ವಿಶ್ವದಲ್ಲಿ ಅಂತರ್ಗತತೆ ಮತ್ತು ವೈವಿಧ್ಯತೆಯ ಮಾದರಿಯಾಗಿ ನಿಂತಿರುವ ಭಾರತವನ್ನು ನಿರ್ಮಿಸಲು ನಾವು ಬಯಸುತ್ತೇವೆ. ನಾಗರಿಕರನ್ನು ವಿಭಜಿಸಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲಬೇಕು ನೀವು ಸರಿಯಾದ ಆಯ್ಕೆಗಳನ್ನು ಮಾಡಿಕೊಂಡು ದೇಶವನ್ನು ಮುನ್ನಡೆಸುತ್ತೀರಿ ಎಂದು ಭಾವಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular