Thursday, September 19, 2024
Google search engine
Homeಮುಖಪುಟಭದ್ರತಾ ಲೋಪ : ತನಿಖೆಗೆ ಟಿಕಾಯತ್ ಆಗ್ರಹ

ಭದ್ರತಾ ಲೋಪ : ತನಿಖೆಗೆ ಟಿಕಾಯತ್ ಆಗ್ರಹ

ಈಗ ಭದ್ರತೆಯಲ್ಲಿ ಲೋಪವಾಗಿದೆಯೇ ಅಥವಾ ರೈತರ ಪ್ರತಿಭಟನೆಯ ಬಿಸಿಯೇ ಎಂಬುದನ್ನು ತನಿಖೆ ಮಾಡುವುದು ಅವಶ್ಯಕ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯಲ್ಲಿ ಲೋಪವಾಗಿದೆಯೇ ಅಥವಾ ಕಾರ್ಯಕ್ರಮ ಬದಲಾಯಿಸಲಾಗಿದೆಯೇ ಅಥವಾ ರೈತರ ಪ್ರತಿಭಟನೆಯಿಂದಾಗಿಯೇ ಎಂಬುದನ್ನು ಖಚಿತಪಡಿಸಲು ತನಿಖೆಗೆ ಒಳಪಡಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.

ಪ್ರಧಾನಿ ಭದ್ರತೆಯ ಲೋಪದಿಂದ ರ್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಜೆಪಿ ಹೇಳುತ್ತಿದ್ದರೆ ಪಂಜಾಬ್ ಮುಖ್ಯಮಂತ್ರಿ ರ್ಯಾಲಿಯಲ್ಲಿ ಖಾಲಿ ಕುರ್ಚಿಗಳಿಂದಾಗಿ ಪ್ರಧಾನಿ ವಾಪಸ್ ಹೋದರು ಎಂದು ಹೇಳುತ್ತಿದ್ದಾರೆ.

ಈಗ ಭದ್ರತೆಯಲ್ಲಿ ಲೋಪವಾಗಿದೆಯೇ ಅಥವಾ ರೈತರ ಪ್ರತಿಭಟನೆಯ ಬಿಸಿಯೇ ಎಂಬುದನ್ನು ತನಿಖೆ ಮಾಡುವುದು ಅವಶ್ಯಕ ಎಂದು ಟಿಕಾಯತ್ ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬುಧವಾರ ಪ್ರಧಾನಿ ಮೋದಿ ಪಂಜಾಬ್ ಗೆ ಬಂದಿದ್ದರು. ಅವರು ಬಟಿಂಡಾದಲ್ಲಿ ಬಂದಿಳಿದಿದ್ದರು. ಪ್ರತಿಕೂಲ ಹವಾಮಾನದಿಂದಾಗಿ ಫಿರೋಜ್ ಪುರದ ಹುಸೇನಿವಾಲಾಗೆ ರಸ್ತೆ ಮಾರ್ಗದಲ್ಲಿ ತೆರಳಿದರು. ಇದರಿಂದ 15-20 ನಿಮಿಷಗಳ ಕಾಲ ಫ್ಲೈಓವರ್ ನಲ್ಲಿ ಸಿಲುಕಿಕೊಳ್ಳಬೇಕಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯ ಫಿರೋಜ್ ಪುರ ಸಾರ್ವಜನಿಕ ರ್ಯಾಲಿ ಸ್ಥಳದಲ್ಲಿ 70,000 ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ 700 ಜನ ಮಾತ್ರ ಬಂದಿದ್ದರು, ಇದಕ್ಕೆ ನಾನೇನು ಮಾಡಲಿ? ಎಂದು ಪಂಜಾಬ್ ಮುಖ್ಯಮಂತ್ರಿ ರಂಜಿತ್ ಸಿಂಗ್ ಚನ್ನಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular