ಹರಾಜಿಗೆ ಮುಸ್ಲಿಂ ಮಹಿಳೆಯರ ಚಿತ್ರಗಳನ್ನು ಪೋಸ್ಟ್ ಮಾಡಿರುವ ಶ್ಯಾದಿ ಆಪ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಐಟಿ ಸಚಿವ ಅಶ್ವಿನಿ ವೈಷ್ಣವ್ ಈ ವಿಷಯದಲ್ಲಿ ದೆಹಲಿ ಮತ್ತು ಮುಂಬೈ ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ದೆಹಲಿ ಸೈಬರ್ ಸೆಲ್ ಭಾನುವಾರ ಎಫ್ಐಆರ್ ದಾಖಲಿಸಿದೆ. ಮುಂಬೈ ಪೊಲೀಸರು ಕೂಡ ಎಫ್ಐಆರ್ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಶ್ಲೀಲ ಕಾಮೆಂಟ್ ಗಳೊಂದಿಗೆ ಕನಿಷ್ಠ 100 ಮಹಿಳೆಯರ ಮಾರ್ಪಡಿಸಿದ ಚಿತ್ರಗಳನ್ನು ಗಿಟ್ ಹಬ್ ನಲ್ಲಿ ಹೋಸ್ಟ್ ಮಾಡಲಾದ ‘ಬುಲ್ಲಿ ಬಾಯಿ’ ಅಪ್ಲಿಕೇಶನ್ ನಲ್ಲಿ ಹಂಚಿಕೊಳ್ಳಲಾಗಿದೆ. ಟ್ವಿಟ್ಟರ್ ನಲ್ಲಿ ವ್ಯಾಪಕ ಖಂಡನೆ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸಲಾಗಿದೆ.
ದೆಹಲಿ ಮತ್ತು ನೋಯ್ಡಾದಲ್ಲಿ ಪೊಲೀಸರು ಮುಸ್ಲಿಂ ಮಹಿಳೆಯರ ಪೋಟೋಗಳನ್ನು ಸುಲ್ಲಿ ಡೀಲ್ಸ್ ಎಂಬ ಗಿಥಬ್ ಅಪ್ಲಿಕೇಶನ್ ಗೆ ಕೂಡ ಅಪ್ ಲೋಡ್ ಮಾಡಿದ ಆರು ತಿಂಗಳ ನಂತರ ಬುಲ್ಲಿ ಬಾಯಿ ಅಪ್ಲಿಕೇಶನ್ ನಲ್ಲಿ ಮುಸ್ಲೀಂ ಮಹಿಳೆಯರ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ.
ರಾಜಕಾರಣಿಗಳು ಮತ್ತು ರಾಷ್ಟ್ರೀಯ ಮಹಿಳಾ ಆಯೋಗ ಕಠಿಣ ಕ್ರಮಕ್ಕೆ ಕೇಂದ್ರದ ಮೇಲೆ ಒತ್ತಡ ಹೇರಿತ್ತು. ಪಿಡಿಪಿಯ ಮೆಹಬೂಬ ಮುಫ್ತಿ ಅವರು ಇಂತಹ ಅಂಶಗಳು ಕೆಟ್ಟ ಕೃತ್ಯಗಳಿಗೆ ಅಧಿಕೃತ ಪ್ರೋತ್ಸಾಹ ನೀಡಿದಂತಿವೆ ಎಂದು ಆರೋಪಿಸಿದ್ದಾರೆ.
ಬುಲ್ಲಿ ಎಂಬ ಅವಹೇಳನಕಾರಿ ಪದವನ್ನು ಮುಸ್ಲೀಂ ಮಹಿಳೆಯರಿಗೆ ಮಾತ್ರ ಬಳಸಲಾಗಿದೆ ಮತ್ತು ಇಡೀ ವೆಬ್ ಸೈಟ್ ಮುಸ್ಲೀಂ ಮಹಿಳೆಯರನ್ನು ಮುಜುಗರ ಮತ್ತು ಅವಮಾನಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ ಎಂದು ಪತ್ರಕರ್ತೆಯೊಬ್ಬರು ದೂರಿದ್ದಾರೆ.