ದೇಶದ ಗಣ್ಯಾತಿಗಣ್ಯರ ಮೊಬೈಲ್ ಗಳಿಮದ ಪೆಗಾಸಸ್ ಸ್ಪೈವೇರ್ ಕಣ್ಗಾವಲು ನಡೆಸುತ್ತಿರುವ ಆರೋಪದ ಕುರಿತ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇತೃತ್ವದ ಸಮಿತಿ ಪೆಗಾಸಸ್ ಮಾಲ್ ವೇರ್ ನಿಂದ ಸಂತ್ರಸ್ತರಾಗಿರುವ ವ್ಯಕ್ತಿಗಳು ವಿವರಗಳನ್ನು ನೀಡುವಂತೆ ಸಾರ್ವಜನಿಕ ಸೂಚನೆ ನೀಡಿದೆ.
ಜನವರಿ 7, 2022ರ ಮಧ್ಯಾಹ್ನದೊಳಗೆ ಮೊದಲ ಮಾಹಿತಿಯನ್ನು ಕಳುಹಿಸಲು ಸಮಿತಿಯು ಪೆಗಾಸಸ್ ಸಂತ್ರಸ್ತರನ್ನು ಕೇಳಿದೆ.
ಎನ್ಎಸ್ಒ ಗುಂಪಿನ ಇಸ್ರೇಲ್ ನ ಪೆಗಾಸಸ್ ಸಾಫ್ಟವೇರ್ ನಿರ್ದಿಷ್ಟ ಬಳಕೆಯಿಂದ ಆಕೆ/ಅವನ ಮೊಬೈಲ್ ಗೆ ಧಕ್ಕೆಯಾಗಿದೆ ಎಂದು ಅನುಮಾನಿಸಲು ಸಮಂಜಸವಾದ ಕಾರಣವಿರುವ ನಾಗರಿಕರು ಸಮಿತಿಯನ್ನು ಸಂಪರ್ಕಿಸಲು ಕೇಳಿದೆ.
ಮಾಲ್ ವೇರ್ ನಿಂದ ಮೊಬೈಲ್ ಕಣ್ಗಾವಲಿಗೆ ಒಳಗಾಗಿದೆ ಎಂಬ ಅನುಮಾನಕ್ಕಾಗಿ ಸಮಿತಿಯು ನಿಮ್ಮ ಪ್ರತಿಕ್ರಿಯೆಯನ್ನು ಹೆಚ್ಚಿನ ತನಿಖೆಗೆ ಒತ್ತಾಯಿಸುತ್ತದೆ ಎಂದು ಭಾವಿಸಿದರೆ, ಸಮಿತಿ ನಿಮ್ಮ ಸಾಧನವನ್ನು ಪರೀಕ್ಷಿಸಲು ಅವಕಾಶ ನೀಡುವಂತೆ ವಿನಂತಿಸುತ್ತದೆ ಎಂದು ಪತ್ರಿಕೆಗಳಲ್ಲಿ ಹೊರಡಿಸಲಾದ ಸೂಚನೆಯಲ್ಲಿ ತಿಳಿಸಲಾಗಿದೆ.
ಸಂಗ್ರಹಣಾ ಕೇಂದ್ರವು ನವದೆಹಲಿಯಲ್ಲಿದೆ ಮತ್ತು ಪರೀಕ್ಷೆ/ತನಿಖೆಗಳು ಪೂರ್ಣಗೊಂಡ ನಂತರ ಮೊಬೈಲ್ ಸಾಧನವನ್ನು ಹಿಂತಿರುಗಿಸಲಾಗುವುದು ಎಂದು ಸಮಿತಿ ಹೇಳಿದೆ.
ಸಮಿತಿಯು ತಾನು ಸೂಕ್ತವೆಂದು ಭಾವಿಸುವ ತನಿಖೆಯನ್ನು ನಡೆಸಬಹುದು ಮತ್ತು ವಿಚಾರಣೆಗೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ ಹೇಳಿಕೆ ಮತ್ತು ದಾಖಲೆಗಳನ್ನು ಪಡೆಯುವ ಯಾವುದೇ ಅಧಿಕಾರ ಹೊಂದಿದೆ.
ತಾಂತ್ರಿಕ ಸಮಿತಿಯಲ್ಲಿ ಗಾಂಧೀನಗರದ ನ್ಯಾಷನಲ್ ಪೋರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿಯ ಸೈಬರ್ ಸೆಕ್ಯೂರಿಟಿ ಮತ್ತು ಡಿಜಿಟಲ್ ಪೋರೆನ್ಸಿಕ್ ಮತ್ತು ಡೀನ್ ಪ್ರೊ. ಡಾ.ನವೀನ್ ಕುಮಾರ್ ಚೌಧರಿ, ಕೇರಳ ಅಮೃತಪುರಿ ಅಮೃತ ವಿಶ್ವ ವಿದ್ಯಾಪೀಠದ ಸ್ಕೂಲ್ ಆಫ್ ಇಂಜಿನಿಯರಿಂಗ್ ಪ್ರೊ. ಡಾ.ಪಿ.ಪ್ರಭಾಹರನ್, ಬಾಂಬೆಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನ್ ಸ್ಟಿಟ್ಯೂಟ್ ಚೇರ್ ಅಸೋಸಿಯೇಟ್ ಪ್ರೊ. ಡಾ.ಅಶ್ವಿನ್ ಅನಿಲ್ ಗುಮಾಸ್ತೆ ಸದಸ್ಯರಾಗಿದ್ದಾರೆ.