Thursday, September 19, 2024
Google search engine
Homeಮುಖಪುಟವಿದೇಶಿ ದೇಣಿಗೆ - 6 ಸಾವಿರ NGO ನವೀಕರಣ ತಿರಸ್ಕರಿಸಿದ ಕೇಂದ್ರ ಸರ್ಕಾರ

ವಿದೇಶಿ ದೇಣಿಗೆ – 6 ಸಾವಿರ NGO ನವೀಕರಣ ತಿರಸ್ಕರಿಸಿದ ಕೇಂದ್ರ ಸರ್ಕಾರ

ಇದರಿಂದಾಗಿ ಈ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ಸಂಸ್ಥೆಗಳು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯ ಅವರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಐಐಟಿ ದೆಹಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತು ನೆಹರು ಸ್ಮಾರಕ ಗ್ರಂಥಾಲಯ ಸೇರಿ 6 ಸಾವಿರ ಸಂಸ್ಥೆಗಳ ನವೀಕರಣ ಅರ್ಜಿಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಇದರಿಂದಾಗಿ ಈ ಸಂಸ್ಥೆಗಳು ವಿದೇಶಿ ದೇಣಿಗೆ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಈ ಸಂಸ್ಥೆಗಳು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಅಥವಾ ಕೇಂದ್ರ ಗೃಹ ಸಚಿವಾಲಯ ಅವರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೋರಿಯಲ್ ಫೌಂಡೇಶನ್, ಲೇಡಿ, ಶ್ರೀ ರಾಮ್ ಕಾಲೇಜ್ ಆಫ್ ವುಮೆನ್, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಆಕ್ಸ್ ಫ್ಯಾಮ್ ಇಂಡಿಯಾ ಸಂಸ್ಥೆಗಳ ನವೀರಕರಣ ಸ್ಥಗಿತಗೊಂಡಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಯಾವುದೇ ಅಸೋಸಿಯೇಷನ್ ಮತ್ತು ಎನ್.ಜಿ.ಒ ವಿದೇಶಿ ದೇಣಿಗೆ ಸ್ವೀಕರಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ನೋಂದಣಿ ಕಡ್ಡಾಯವಾಗಿದೆ. ಶುಕ್ರವಾರದವರೆಗೆ 22,762 ಸರ್ಕಾರೇತರ ಸಂಸ್ಥೆಗಳು ನೋಂದಣಿ ಮಾಡಿಕೊಂಡಿವೆ.

ಎಫ್‌ಸಿಆರ್‌ಎ ನೋಂದಣಿ ಸ್ಥಗಿತಗೊಂಡ ಸಂಸ್ಥೆಗಳಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಎಮ್ಯಾನುಯೆಲ್ ಹಾಸ್ಪಿಟಲ್ ಅಸೋಸಿಯೇಷನ್, ದೇಶಾದ್ಯಂತ ಹನ್ನೆರಡು ಆಸ್ಪತ್ರೆಗಳನ್ನು ನಡೆಸುತ್ತಿವೆ.

ಕ್ಷಯರೋಗ ಅಸೋಸಿಯೇಷನ್ ​​ಆಫ್ ಇಂಡಿಯಾ, ವಿಶ್ವ ಧರ್ಮಾಯತನ, ಮಹರ್ಷಿ ಆಯುರ್ವೇದ ಪ್ರತಿಷ್ಠಾನ, ನ್ಯಾಷನಲ್ ಫೆಡರೇಶನ್ ಆಫ್ ಫಿಶರ್‌ಮೆನ್ಸ್ ಕೋಆಪರೇಟಿವ್ಸ್ ಲಿಮಿಟೆಡ್. ಹಮ್ದರ್ದ್ ಎಜುಕೇಶನ್ ಸೊಸೈಟಿ, ದೆಹಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಸೊಸೈಟಿ, ಭಾರತೀಯ ಸಂಸ್ಕೃತಿ ಪರಿಷತ್, ಡಿಎವಿ ಕಾಲೇಜ್ ಟ್ರಸ್ಟ್ ಮತ್ತು ಮ್ಯಾನೇಜ್ಮೆಂಟ್ ಸೊಸೈಟಿ, ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್, ಗೋದ್ರೇಜ್ ಮೆಮೋರಿಯಲ್ ಟ್ರಸ್ಟ್, ದಿ ದೆಹಲಿ ಪಬ್ಲಿಕ್ ಸ್ಕೂಲ್ ಸೊಸೈಟಿ, ಜೆಎನ್‌ಯುನಲ್ಲಿರುವ ನ್ಯೂಕ್ಲಿಯರ್ ಸೈನ್ಸ್ ಸೆಂಟರ್, ಇಂಡಿಯಾ ಹ್ಯಾಬಿಟಾಟ್ ಸೆಂಟರ್, ಆಲ್ ಇಂಡಿಯಾ ಮಾರ್ವಾರಿ ಯುವ ಮಂಚ್ ಸಹ ನವೀಕರಣಗೊಳ್ಳದ ಸಂಸ್ಥೆಗಳಲ್ಲಿ ಸೇರಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular