ಬೀಜಿಂಗ್ ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಚೀನಿ ಹೆಸರುಗಳನ್ನು ನೀಡಿರುವುದಕ್ಕೆ ಭಾರತ ಚೀನಾವನ್ನು ತರಾಟೆಗೆ ತೆಗೆದುಕೊಂಡಿದೆ.
ಜೂನ್ 2020 ರಲ್ಲಿ 20ರಿಂದ ಎರಡೂ ಕಡೆಯಿಂದ ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ಸಾವಿರಾರು ಹೆಚ್ಚುವರಿ ಸೈನಿಕರು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ದಕ್ಷಿಣ ಟಿಬೆಟ್ ನಲ್ಲಿನ 15 ಸ್ಥಳಗಳ ಹೆಸರುಗಳನ್ನು ಚೀನೀ ಹೆಸರುಗಳನ್ನಿಟ್ಟು ಪ್ರಮಾಣೀಕರಿಸಿದೆ ಎಂದು ಹೇಳಿದೆ.
ಭಾರತದ ಅರುಣಾಚಲ ಪ್ರದೇಶ ಎಂದು ಕರೆಯುವ ಪ್ರದೇಶಕ್ಕೆ ಬೀಜಿಂಗ್‌ನ ಶೀರ್ಷಿಕೆ ಮತ್ತು ಔಪಚಾರಿಕ ಚೀನೀ ಹೆಸರುಗಳನ್ನು ನೀಡಿದೆ.
ವಸತಿ ಪ್ರದೇಶಗಳು, ನದಿಗಳು ಮತ್ತು ಪರ್ವತಗಳ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತ ಅರುಣಾಚಲ ಪ್ರದೇಶ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ ಎಂದು ಹೇಳಿದೆ.
ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಿ ಹೆಸರುಗಳನ್ನು ಇಟ್ಟಿರುವುದರಿಂದ ಸತ್ಯವನ್ನು ಬದಲಾಯಿಸಲು ಆಗುವುದಿಲ್ಲ ಎಂದು ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ದಕ್ಷಿಣ ಟಿಬೆಟ್ ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿದೆ. ಐತಿಹಾಸಿಕವಾಗಿ ಚೀನಾದ ಭೂಪ್ರದೇಶವಾಗಿದೆ ಎಂದು ಹೇಳಿದರು,
ಚೀನಾದ ಹೊಸ ಭೂ ಗಡಿ ಕಾನೂನನ್ನು ಅಕ್ಟೋಬರ್‌ನಲ್ಲಿ ಅನುಮೋದಿಸಲಾಗಿದ್ದು ಜನವರಿ 1 ರಂದು ಜಾರಿಗೆ ಬರಲಿದೆ.
ಅರುಣಾಚಲ ಪ್ರದೇಶದಲ್ಲಿ 15 ಸ್ಥಳಗಳಿಗೆ ಇದ್ದ ಹೆಸರುಗಳನ್ನು ಚೀನಾ ಮರುನಾಮಕರಣ ಮಾಡಿದೆ. ಭಾರತದ ಗಡಿಯೊಳಗೆ ಎರಡು ಹಳ್ಳಿಗಳನ್ನು ಚೀನಾ ನಿರ್ಮಾಣ ಮಾಡಿದೆ. ಆದರೆ ಭಾರತ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.