Friday, September 20, 2024
Google search engine
Homeಮುಖಪುಟಮಹಾತ್ಮಗಾಂಧಿಗೆ ಅವಮಾನ ಮಾಡಿದ ಧಾರ್ಮಿಕ ಮುಖಂಡ ಕಾಳೀಚರಣ್ ಬಂಧನ

ಮಹಾತ್ಮಗಾಂಧಿಗೆ ಅವಮಾನ ಮಾಡಿದ ಧಾರ್ಮಿಕ ಮುಖಂಡ ಕಾಳೀಚರಣ್ ಬಂಧನ

ಕಾಳೀಚರಣ್ ಖಜುರಾಹೊದಲ್ಲಿ ಅತಿಥಿ ಗೃಹ ಕಾಯ್ದಿರಿಸಿದ್ದರೂ ಅಲ್ಲಿ ಉಳಿದುಕೊಂಡಿರಲಿಲ್ಲ. ಬದಲಿಗೆ ಖಜುರಾಹೊದಿಂದ 25 ಕಿಮೀ ದೂರದಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಇದನ್ನು ಖಚಿತಪಡಿಸಿಕೊಂಡ ಪೊಲೀಸರು ಕಾಳೀಚರಣ್ ನನ್ನು ಬಂಧಿಸಿದ್ದಾರೆ.

ಮಹಾತ್ಮ ಗಾಂಧೀಯವರನ್ನು ಅವಮಾನಿಸಿ, ಗಾಂಧೀ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಮಹಾರಾಷ್ಟ್ರದ ಹಿಂದುತ್ವವಾದಿ ಧಾರ್ಮಿಕ ಮುಖಂಡನನ್ನು ಮಧ್ಯಪ್ರದೇಶದ ಖಜುರಾಹೊದಲ್ಲಿ ಛತ್ತೀಸ್ ಗಡ ಪೊಲೀಸರು ಬಂಧಿಸಿದ್ದಾರೆ.

ಛತ್ತೀಸ್ ಗಡ ರಾಯ್ ಪುರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಿವಾದಾತ್ಮಕ ಮಾಡಿದ್ದ ಕಾಳೀಚರಣ್, ಗಾಂಧೀಜಿ ಅವರಿಗೆ ಅವಮಾನ ಮಾಡಿದ್ದರು. ಇದರ ವಿರುದ್ಧ ಮಾಜಿ ಮೇಯರ್ ಪ್ರಮೋದ್ ದುಬೆ ಪೊಲೀಸರಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಸಾರ್ವಜನಿಕರಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಕಾಳೀಚರಣ್ ನನ್ನು ಬಂಧಿಸಲಾಗಿದೆ.

ಕಾಳೀಚರಣ್ ಖಜುರಾಹೊದಲ್ಲಿ ಅತಿಥಿ ಗೃಹ ಕಾಯ್ದಿರಿಸಿದ್ದರೂ ಅಲ್ಲಿ ಉಳಿದುಕೊಂಡಿರಲಿಲ್ಲ. ಬದಲಿಗೆ ಖಜುರಾಹೊದಿಂದ 25 ಕಿಮೀ ದೂರದಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಇದನ್ನು ಖಚಿತಪಡಿಸಿಕೊಂಡ ಪೊಲೀಸರು ಕಾಳೀಚರಣ್ ನನ್ನು ಬಂಧಿಸಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಳೀಚರಣ್ ತನ್ನ ಆಪ್ತ ಸಹಾಯಕರ ಫೋನ್ ಗಳನ್ನು ಸ್ವಿಚ್ ಆಫ್ ಮಾಡಿಸಿದ್ದ. ಇಂದು ಬೆಳಗ್ಗೆ 10 ಪೊಲೀಸರ ತಂಡ ಆತನನ್ನು ಪತ್ತೆಹಚ್ಚಿ ರಾಯಪುರಕ್ಕೆ ಕರೆದೊಯ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕಾಳೀಚರಣ್ ವಿಡಿಯೋ ಕ್ಲಿಪ್ ಗಳಲ್ಲಿ ‘ಮೋಹನದಾಸ್ ಕರಮಚಂದ್ ಗಾಂಧಿ ದೇಶವನ್ನು ನಾಶಪಡಿಸಿದರು. ಅದಕ್ಕಾಗಿ ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮಸ್ಕಾರಗಳು’ ಎಂದು ಹೇಳಿ ವಿವಾದಕ್ಕೆ ಒಳಗಾಗಿದ್ದ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular