Friday, September 20, 2024
Google search engine
Homeಮುಖಪುಟಕುವೆಂಪು ಚಿಂತನೆ ರೋಗಗ್ರಸ್ತ ಮನಸ್ಸಿಗೆ ದಿವ್ಯೌಷಧಿ

ಕುವೆಂಪು ಚಿಂತನೆ ರೋಗಗ್ರಸ್ತ ಮನಸ್ಸಿಗೆ ದಿವ್ಯೌಷಧಿ

ಕುವೆಂಪು ಸಾಹಿತ್ಯ ಆಧ್ಯಯನದ ಮೂಲಕ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಓದು, ಸಾಹಿತ್ಯದ ಅಭಿರುಚಿ ಬೆಳೆಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.

ದೇಶ ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದು ಕೊರೊನ ಮತ್ತು ರಾಜಕೀಯ ವೈರಾಣುಗಳಿಂದ ಜನತೆ ದೈಹಿಕ-ಮಾನಸಿಕವಾಗಿ ತಳಗೊಳ್ಳುವಂತೆ ಮಾಡಿದೆ. ಇಂತಹ ಸಂದರ್ಭದಲ್ಲಿ ರೋಗಗ್ರಸ್ತ ಮನಸ್ಸುಗಳಿಗೆ ಕುವೆಂಪು ಚಿಂತನೆಗಳು ದಿವ್ಯೌಷಧವಾಗಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ತುಮಕೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಸ್ತ್ರೀಸಂವೇದನೆಯನ್ನು ಇಟ್ಟಿಕೊಂಡಿದ್ದ ಬಹುದೊಡ್ಡ ಲೇಖಕರಾಗಿದ್ದರು. ಅವರ ಸಾಹಿತ್ಯದಲ್ಲಿ ಸ್ತ್ರೀ ಪ್ರಧಾನ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೆಣ್ಣಿನ ಮನೋವೇದನೆ, ಸಂಕಥನಗಳು ವ್ಯಕ್ತವಾಗಿದೆ. ಪ್ರತಿಭಟನಾಶಕ್ತಿಯ ಸ್ತ್ರೀ ಪಾತ್ರಗಳಿವೆ ಎಂದು ಹೇಳಿದರು.

ಕುವೆಂಪು ಸಾಹಿತ್ಯ ಆಧ್ಯಯನದ ಮೂಲಕ ವೈಚಾರಿಕತೆ ಬೆಳೆಸಿಕೊಳ್ಳಬೇಕು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಓದು, ಸಾಹಿತ್ಯದ ಅಭಿರುಚಿ ಬೆಳೆಸಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಜಿ.ಮಲ್ಲಿಕಾ ಬಸವರಾಜು ಪ್ರಾಸ್ತಾವಿಕ ಮಾತನಾಡಿ ವರ್ತಮಾನದ ತಲ್ಲಣಗಳಿಗೆ, ಸಂಕಟಗಳಿಗೆ ಕುವೆಂಪುರವರ ಬರಹದಲ್ಲಿ ಪರಿಹಾರವಿದೆ ಎಂದರು.

ಮಲೆಗಳಲ್ಲಿ ಮದುಮಗಳು ಮತ್ತು ಮಹಿಳೆ ವಿಷಯ ಕುರಿತು ಮಾತನಾಡಿದ ಉಮಾ ಗ್ಯಾರಳ್ಳ, ಕಾದಂಬರಿಯಲ್ಲಿ ಬರುವ ಮಹಿಳೆಯರು ಅಕ್ಷರಲೋಕಕ್ಕೆ ತೆರೆದುಕೊಂಡವರಲ್ಲ. ಆದರೂ ಸೇಸಿ, ತಿಮ್ಮಿ, ಪೀಂಚಲು, ಚಿನ್ನಮ್ಮನಂತಹ ಸ್ತ್ರೀ ಪಾತ್ರಗಳು ಆವೊತ್ತಿನ ಸಂದರ್ಭದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಳ್ಳುವುದನ್ನು ಕುವೆಂಪು ಚಿತ್ರಿಸಿರುವುದು ಕಾಣಬಹುದು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular