ಸೂಡಾನ್ ನ ಪಶ್ಚಿಮ ಕೊರ್ಡೋಫಾನ್ ಪ್ರಾಂತ್ಯದಲ್ಲಿ ಚಿನ್ನದ ಗಣಿ ಕುಸಿದ ಪರಿಣಾಮ ಮಂಗಳವಾರ ಕನಿಷ್ಠ 38 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪನಿ ಈ ಕುರಿತು ಹೇಳಿಕೆ ನೀಡಿದ್ದು ಖಾರ್ಟೌಮ್ ದಕ್ಷಿಣಕ್ಕೆ 700 ಕಿಲೋಮೀಟರ್ ದೂರದಲ್ಲಿರುವ ಪುಆ ಗ್ರಾಮದಲ್ಲಿ ಚಿನ್ನದ ಗಣಿ ಕುಸಿದಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಚಿನ್ನದ ಗಣಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ದರ್ಶಯ ಗಣಿಯಲ್ಲಿ ಹಲವಾರು ಶಾಫ್ಟ್ ಗಳು ಕುಸಿದಿವೆ ಮತ್ತು 38 ಮಂದಿ ಮೃತರಲ್ಲದೆ ಎಂಟು ಮಂದಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಕನಿಷ್ಟ ಎರಡು ಡ್ರೆಡ್ಜರ್ ಗಳು ಬದುಕುಳಿದಿದ್ದಾರೆ. ಗಣಿಯ ಅವಶೇಷಗಳಡಿ ಹೂತು ಹೋಗಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆದಿದೆ. ಇನ್ನೊಂದೆಡೆ ಮೃತ ದೇಹಗಳನ್ನು ಹೂಳಲು ಜನರು ಸಮಾಧಿ ಸಿದ್ದಪಡಿಸುತ್ತಿರುವ ಚಿತ್ರಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಗಣಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಪನಿ ಹೇಳಿದೆ. ಆದರೆ ಗಣಿ ಕಾವಲು ಕಾಯುತ್ತಿದ್ದ ಭದ್ರತಾ ಪಡೆಗಳು ಆ ಪ್ರದೇಶ ತೊರೆದ ನಂತರ ಸ್ಥಳೀಯ ಗಣಿಗಾರರು ಕೆಲಸ ಮಾಡಲು ಮರಳಿದರು. ಗಣಿ ಯಾವಾಗ ಕೆಲಸ ನಿಲ್ಲಿಸಿತು ಎಂದು ಹೇಳಿಲ್ಲ.