ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯಡಿ ಮಿಷನರೀಸ್ ಆಫ್ ಚಾರಿಟಿಯ ನೋಂದಣಿಯನ್ನು ನವೀಕರಿಸಲು ಕೇಂದ್ರ ಸರ್ಕಾರ ನಿರಾಕರಿಸಿರುವುದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ದೇಶದಲ್ಲಿ ಹಿಂದುತ್ವ ಬ್ರಿಗೇಡ್ ಮುಸ್ಲಿಮರ ಬಳಿಕ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿದೆ ಎಂದು ಆರೋಪಿಸಿದ್ದಾರೆ.
ಗೋವಾ ಚುನಾವಣೆಯ ವೀಕ್ಷಕರಾಗಿರುವ ಕಾಂಗ್ರೆಸ್ ನಾಯಕ ಚಿದಂಬರಂ, ಮಿಷನರೀಸ್ ಆಫ್ ಚಾರಿಟಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯದ ಕಟ್ಟುಕಥೆಯನ್ನು ಮುಖ್ಯವಾಹಿನಿ ಮಾದ್ಯಮ ಬಹಿಷ್ಕರಿಸಿದ್ದು ಇದು ದುಃಖದಾಯಕ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿದೆ ಎಂದು ತಿಳಿಸಿದರು.
ಮಿಷನರೀಸ್ ಆಫ್ ಚಾರಿಟಿಯ ನವೀಕರಣದ ನಿರಾಕರಣೆಯು ಭಾರತದ ಬಡವರಿಗೆ ಉತ್ತಮ ಸೇವೆ ಕಲ್ಪಿಸುತ್ತಿರುವ ಸರ್ಕಾರೇತರ ಸಂಸ್ಥೆಗಳ ಮೇಲಿನ ನೇರ ದಾಳಿಯಾಗಿದೆ ಎಂದು ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.
ಮಿಷನರೀಸ್ ಆಫ್ ಚಾರಿಟಿ ಪ್ರಕರಣದಲ್ಲಿ, ಇದು ಕ್ರಿಶ್ಚಿಯನ್ ಧರ್ಮಾರ್ಥ ಕಾರ್ಯಗಳ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಬಹಿರಂಗಪಡಿಸುತ್ತದೆ. ಮುಸ್ಲಿಮರ ನಂತರ, ಕ್ರಿಶ್ಚಿಯನ್ನರು ಹಿಂದುತ್ವ ಬ್ರಿಗೇಡ್‌ನ ಹೊಸ ಗುರಿಯಾಗಿದ್ದಾರೆ ಎಂದು ಚಿದಂಬರಂ ಆಪಾದಿಸಿದ್ದಾರೆ.
ಗೋವಾ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡು ಸೋಲಿನ ನಂತರ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿ ಕೆಲಸ ಮಾಡುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


