2024ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಒಂದು ಕೋಟಿ ಮತಗಳನ್ನು ಪಡೆದರೆ ರಾಜ್ಯದ ಜನರಿಗೆ 70ರೂಗೆ ಮದ್ಯ ದೊರೆಯಲಿದೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜ ಭರವಸೆ ನೀಡಿದ್ದಾರೆ.
ವಿಜಯವಾಡದಲ್ಲಿ ಪಕ್ಷದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ವೀರರಾಜು, ರಾಜ್ಯದಲ್ಲಿ ಕಳಪೆ ಗುಣಮಟ್ಟದ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಆದರೆ ಜನರು ತಿಳಿದಿರುವ ಮತ್ತು ಜನಪ್ರಿಯ ಬ್ರಾಂಡ್‌ಗಳು ಲಭ್ಯವಿಲ್ಲ ಎಂದು ಆರೋಪಿಸಿದರು.
ವಿಶೇಷ ಸ್ಥಾನಮಾನ, ರಾಜ್ಯಪಾಲರ ಪದಕದಂತಹ ಲೇಬಲ್‌ಗಳ ಅಡಿಯಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಮದ್ಯ ಮಾರಾಟ ಮಾಡುತ್ತಿಲ್ಲ. ಅವರು ಸಂಪೂರ್ಣ ಮದ್ಯ ನಿಷೇಧ ಎಂದು ಹೇಳಿದರು ಆದರೆ ಬ್ರಾಂಡಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ, ಎಂದು ಆರೋಪಿಸಿದರು.
ಭಾರತೀಯ ಜನತಾ ಪಕ್ಷಕ್ಕೆ ಒಂದು ಕೋಟಿ ಮತಗಳನ್ನು ನೀಡಿ, ನಾವು ನಿಮಗೆ ಕೇವಲ 70 ರೂ.ಗೆ ಮದ್ಯವನ್ನು ನೀಡುತ್ತೇವೆ. ನಮಗೆ ಹೆಚ್ಚಿನ ಆದಾಯ ಬಂದರೆ, ಕೇವಲ 50 ರೂ.ಗೆ ಮದ್ಯವನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು.
ಸರ್ಕಾರ ನಕಲಿ ಮದ್ಯ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ರಾಜ್ಯ ಸರ್ಕಾರ ಜನರ ರಕ್ತ ಕುಡಿಯುತ್ತಿದ್ದೀರಿ. ಪ್ರತಿ ತಿಂಗಳು ಒಬ್ಬ ವ್ಯಕ್ತಿ ಮದ್ಯಕ್ಕೆ 12 ಸಾವಿರ ರೂ ತೆರಬೇಕಾಗಿದೆ. ಈ ಹಣವನ್ನು ಸರ್ಕಾರ ಕಲ್ಯಾಣ ಯೋಜನೆಗಳ ನೆಪದಲ್ಲಿ ಪಡೆದು ವಾಪಸು ನೀಡುತ್ತಿದೆ ಎಂದು ಸೋಮು ವೀರರಾಜು ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಬ್ರಾಂಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕಾರಣ ರಾಜ್ಯದಲ್ಲಿ ಪ್ರಿಮಿಯಂನಲ್ಲಿ ಮದ್ಯ ಮಾರಾಟವಾಗುತ್ತಿದೆ. ಇತ್ತೀಚೆಗೆ, ರಾಜ್ಯ ಸರ್ಕಾರ ಮದ್ಯದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿತಗೊಳಿಸಿದೆ. ಆದರೆ ವಿಶೇಷ ಮಾರ್ಜಿನ್ ಸೇರ್ಪಡೆಯೊಂದಿಗೆ ಎಂಆರ್.ಪಿಗಳು ಬದಲಾಗದೆ ಇರುವುದರಿಂದ ಇದರ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿಲ್ಲ ಎಂದು ಮುಖ್ಯಮಂತ್ರಿ ಜಗನ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.