Friday, November 22, 2024
Google search engine
Homeಮುಖಪುಟಮದುವೆ ವಯಸ್ಸು ಏರಿಕೆ ನಿರ್ಧಾರಕ್ಕೆ ವಿರೋಧ - ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂದ ಡಿವೈಎಫ್ಐ

ಮದುವೆ ವಯಸ್ಸು ಏರಿಕೆ ನಿರ್ಧಾರಕ್ಕೆ ವಿರೋಧ – ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂದ ಡಿವೈಎಫ್ಐ

ಸಮಾನತೆ ಮತ್ತು ಲಿಂಗ ಸಮಾನತೆ ಗುರಿಗಳಾಗಿದ್ದರೆ, 18ನೇ ಕಾನೂನು ಆಯೋಗ ಶಿಫಾರಸು ಮಾಡಿದಂತೆ ಕೇಂದ್ರ ಸರ್ಕಾರ ಮದುವೆ ವಯಸ್ಸನ್ನು ಕಡಿಮೆ ಮಾಡಬೇಕಿತ್ತು. ಬದಲಿಗೆ ಬಿಜೆಪಿ ನಾಯಕ ಅಶ್ವಿನ್ ಕುಮಾರ್ ಉಪಾಧ್ಯಾಯ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಯುವತಿಯರ ಮದುವೆಯ ವಯಸ್ಸು ಹೆಚ್ಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾ (ಡಿವೈಎಫ್ಐ) ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದು ಯುವತಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟುಕುಗೊಳಿಸುವ ಯತ್ನ ಎಂದು ಟೀಕಿಸಿದೆ.

ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಎ.ಎ.ರಹೀಮ್ ಸರಣಿ ಟ್ವೀಟ್ ಗಳ ಮೂಲಕ ಕೇಂದ್ರ ಸರ್ಕಾರದ ತೀರ್ಮಾನವನ್ನು ಖಂಡಿಸಿದ್ದಾರೆ ಸರ್ಕಾರ ಜನರ ಮದುವೆಯ ಆಯ್ಕೆಗಳ ಜೊತೆ ಅನಾರೋಗ್ಯಕರ ಪೈಪೋಟಿಗೆ ಇಳಿದಿದೆ ಎಂದು ಆರೋಪಿಸಿದ್ದಾರೆ.

ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು ಹೆಚ್ಚಿಸುವ ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಡಿವೈಎಫ್ಐ ಒಪ್ಪುವುದಿಲ್ಲ. ಕೇಂದ್ರ ಸರ್ಕಾರದ ಈ ದುಷ್ಕೃತ್ಯವನ್ನು ಶಂಕಿಸಲು ಬಲವಾದ ಕಾರಣಗಳಿವೆ ಎಂದು ಹೇಳಿದ್ದಾರೆ.

ರಹೀಮ್ ಮಾತನಾಡಿ, ಸಮಾನತೆ ಮತ್ತು ಲಿಂಗ ಸಮಾನತೆ ಗುರಿಗಳಾಗಿದ್ದರೆ, 18ನೇ ಕಾನೂನು ಆಯೋಗ ಶಿಫಾರಸು ಮಾಡಿದಂತೆ ಕೇಂದ್ರ ಸರ್ಕಾರ ಮದುವೆ ವಯಸ್ಸನ್ನು ಕಡಿಮೆ ಮಾಡಬೇಕಿತ್ತು. ಬದಲಿಗೆ ಬಿಜೆಪಿ ನಾಯಕ ಅಶ್ವಿನ್ ಕುಮಾರ್ ಉಪಾಧ್ಯಾಯ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿಗಳ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಆಡಳಿತ ವ್ಯವಸ್ಥೆ ಜನರ ಮದುವೆ ಆಯ್ಕೆಗಳೊಂದಿಗೆ ಅನಾರೋಗ್ಯಕರ ಗೀಳು ಪ್ರದರ್ಶಿಸಿದೆ. ಅವರ ವೈಯಕ್ತಿ ಸ್ವಾತಂತ್ರ್ಯವನ್ನು ಅತಿಕ್ರಮಿಸಲು ಎಂದಿಗೂ ಹಿಂಜರಿಯುವುದಿಲ್ಲ ಎಂದು ಹೇಳಿದರು.

ಪ್ರಸ್ತಾವಿತ ಮಸೂದೆಯು ಏಕರೂಪದ ವಿವಾಹ ವಯಸ್ಸನ್ನು ಖಚಿತಪಡಿಸಿಕೊಳ್ಳಲು ವಿವಿಧ ಸಮುದಾಯಗಳ ವಿವಾಹಕ್ಕೆ ಸಂಬಂಧಿಸಿದ ವಿವಿಧ ವೈಯಕ್ತಿಕ ಕಾನೂನುಗಳಿಗೆ ಅನುಗುಣವಾದ ಬದಲಾವಣೆಗಳನ್ನು ಮಾಡಲು ಪ್ರಯತ್ನಿಸಬಹುದು.

ಈಗಿನಂತೆ ಮದುವೆಯಾಗಲು ಹೆಣ್ಣುಮಕ್ಕಳಿಗೆ ಕಾನೂನುಬದ್ಧ ವಯಸ್ಸು 18 ಮತ್ತು ಯುವಕರಿಗೆ 21 ವರ್ಷ ಇದೆ. ಸರ್ಕಾರ ಮಹಿಳಾ ಸಬಲೀಕರಣ ಮುಚ್ಚಿಟ್ಟಿರುವ ಕಾರಣ ಸಮಸ್ಯೆಗಳ ಸಂಕೀರ್ಣತೆಯನ್ನು ಕಡಿಮೆ ಅಂದಾಜು ಮಾಡಬಾರದು. ಕೇಂದ್ರ ತನ್ನ ದ್ವಂದ್ವವನ್ನು ಬಹಿರಂಗಪಡಿಸಬೇಕು ಎಂದು ರಹೀಮ್ ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular