Friday, September 20, 2024
Google search engine
Homeಮುಖಪುಟಬಾಲಸೋರ್ ನಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಬಾಲಸೋರ್ ನಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಭಾರತ ಹೊಸ ತಂತ್ರಜ್ಞಾನ ಮತ್ತು ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯತಂತ್ರದ ಕ್ಷಿಪಣಿಗಳ ಶಸ್ತ್ರಾಗಾರ ವನ್ನು ಮತ್ತಷ್ಟು ಬಲಪಡಿಸುವ ಪ್ರಕ್ರಿಯೆಯಲ್ಲಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಒಡಿಶಾದ ಕರಾವಳಿ ತೀರದ ಬಾಲಸೋರ್ ನಲ್ಲಿ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಿ 1 ರಿಂದ 2 ಸಾವಿರ ಕಿಲೋ ಮೀಟರ್ ದೂರಕ್ಕೆ ಚಿಮ್ಮುವ ಸಾಮರ್ಥ್ಯವನ್ನು ಹೊಂದಿದೆ.

ಅಗ್ನಿ ಪ್ರೈಮ್, ಅಗ್ನಿ ವರ್ಗದ ಕ್ಷಿಪಣಿಗಳ ಹೊಸ ತಲೆಮಾರಿನ ಸುಧಾರಿತ ರೂಪಾಂತರವಾಗಿದೆ. ಇದು ಕ್ಯಾನಿಸ್ಟರೈಸ್ಡ್ ಕ್ಷಿಪಣಿಯಾಗಿದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಪರೀಕ್ಷೆಯಲ್ಲಿ ಪರಮಾಣು ಸಾಮರ್ಥ್ಯದ ಕಾರ್ಯತಂತ್ರದ ಕ್ಷಿಪಣಿ ಅಗ್ನಿ ಪ್ರೈಮ್ ಗೆ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಕ್ಷಿಪಣಿ ಪರೀಕ್ಷಯ ಅದರ ಎಲ್ಲಾ ಉದ್ದೇಶಗಳನ್ನು ಉನ್ನತ ಮಟ್ಟದ ನಿಖರತೆಯೊಂದಿಗೆ ಪೂರೈಸಿದೆ ಎಂದು ಹೇಳಿದ್ದಾರೆ.

ಕ್ಷಿಪಣಿಯ ಕೊನೆಯ ಪರೀಕ್ಷೆಯನ್ನು ಈ ವರ್ಷದ ಜೂನ್ 28ರಂದು ನಡೆಸಲಾಯಿತು. ಕ್ಷಿಪಣಿಯು ಸಂಪೂರ್ಣ ಪ್ರಗತಿ ಸಾಧಿಸುತ್ತಿದೆ. ಇದು ಶೀಘ್ರವೇ ಕಾರ್ಯತಂತ್ರದ ಪಡೆಗಳಿಗೆ ಕಾರ್ಯಾಚರಣೆ ನಡೆಸಲು ಸಿದ್ದವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಭಾರತ ಹೊಸ ತಂತ್ರಜ್ಞಾನ ಮತ್ತು ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಕಾರ್ಯತಂತ್ರದ ಕ್ಷಿಪಣಿಗಳ ಶಸ್ತ್ರಾಗಾರ ವನ್ನು ಮತ್ತಷ್ಟು ಬಲಪಡಿಸುವ ಪ್ರಕ್ರಿಯೆಯಲ್ಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular