ಹೈಟಿಯ ಕ್ಯಾಪ್-ಹೈಟಿಯನ್ ನಗರದಲ್ಲಿ ಮಂಗಳವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಠ 50 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್.ಪಿ ವರದಿ ಮಾಡಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ನಾನು ದೃಶ್ಯದಲ್ಲಿ 50 ರಿಂದ 54 ಜನರನ್ನು ಜೀವಂತವಾಗಿ ಸುಟ್ಟುಹಾಕಿರುವುದನ್ನು ನಾನು ನೋಡಿದೆ. ಅವರನ್ನು ಗುರುತಿಸುವುದು ಅಸಾಧ್ಯ. ಸ್ಫೋಟದಿಂದ ಆ ಪ್ರದೇಶದಲ್ಲಿ ಸುಮಾರು 20 ಮನೆಗಳು ಸುಟ್ಟು ಭಸ್ಮವಾಗಿವೆ ಎಂದು ಎಂದು ಉಪ ಮೇಯರ್ ಪ್ಯಾಟ್ರಿಕ್ ಅಲ್ಮೊನರ್ ಹೇಳಿದ್ದಾರೆ.
ಮನೆಯೊಳಗೆ ಬಲಿಯಾದವರ ಸಂಖ್ಯೆಯ ಬಗ್ಗೆ ನಾವು ಇನ್ನೂ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದಾಗ ಸಮೀಪದ ಜಸ್ಟಿನಿಯನ್ ಯೂನಿವರ್ಸಿಟಿ ಆಸ್ಪತ್ರೆಯು ರೋಗಿಗಳಿಂದ ತುಂಬಿ ತುಳುಕುತ್ತಿತ್ತು. ಗಂಭೀರವಾಗಿ ಸುಟ್ಟು ಗಾಯಗೊಂಡವರಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ನಾವು ಹೊಂದಿಲ್ಲ ಎಂದು ನರ್ಸ್ ತಿಳಿಸಿದರು.
ಹೈಟಿಯ ಪ್ರಧಾನಿ ಏರಿಯಲ್ ಹೆನ್ರಿ ರಾಷ್ಟ್ರೀಯ ಶೋಕಾಚರಣೆ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಫೋಟದಿಂದ ಸುಮಾರು 40 ಜನರು ಸತ್ತಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಇಡೀ ಹೈಟಿ ರಾಷ್ಟ್ರವನ್ನು ಬೆಚ್ಚಿಬೀಳುವಂತೆ ಮಾಡಿರುವ ಈ ದುರಂತದಲ್ಲಿ ಮೃತಪಟ್ಟವರಿಗೆ ಮೂರು ದಿನ ರಾಷ್ಟ್ರೀಯ ಶೋಕ ಆಚರಣೆ ನಡೆಸುವಂತೆ ತಿಳಿಸಲಾಗಿದೆ.
ರಸ್ತೆಯ ಮೇಲೆ ಚೆಲ್ಲಿದ ಮತ್ತು ಟ್ಯಾಂಕರ್‌ನ ಅನಿಲವನ್ನು ಸಂಗ್ರಹಿಸಲು ನೂರಾರು ಮಂದಿ ಧಾವಿಸಿದರು, ಇದು ಪ್ರಸ್ತುತ ಕ್ರಿಮಿನಲ್ ಗ್ಯಾಂಗ್‌ಗಳ ಬಿಗಿ ಹಿಡಿತದಿಂದ ಉಂಟಾದ ತೀವ್ರ ಇಂಧನ ಕೊರತೆಯನ್ನು ತೋರಿಸುತ್ತದೆ.
ಅಲ್ಮೊನರ್ ಪ್ರಕಾರ, ಮೋಟಾರ್ ಸೈಕಲ್ ಟ್ಯಾಕ್ಸಿಯನ್ನು ತಪ್ಪಿಸಲು ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ.


