Friday, September 20, 2024
Google search engine
Homeಮುಖಪುಟಪಿಎಚ್.ಡಿ ಆಕಾಂಕ್ಷಿಗಳ ವೈವಾದಲ್ಲಿ ತಾರತಮ್ಯ - ಜೆಎನ್.ಯು ವಿವಿ ನಿರಾಕರಣೆ

ಪಿಎಚ್.ಡಿ ಆಕಾಂಕ್ಷಿಗಳ ವೈವಾದಲ್ಲಿ ತಾರತಮ್ಯ – ಜೆಎನ್.ಯು ವಿವಿ ನಿರಾಕರಣೆ

“ವೈವಾ ವಾಯ್ಸ್ ಅನ್ನು ನಡೆಸುವ ಪಿಎಚ್‌ಡಿ ಆಯ್ಕೆ ಸಮಿತಿಗಳ ಸದಸ್ಯರಿಗೆ ಪಕ್ಷಪಾತ ಮತ್ತು ಪೂರ್ವಾಗ್ರಹ ಮಾಡದಂತೆ ಕ್ರಮ ಕೈಗೊಂಡಿದ್ದು, ಅಭ್ಯರ್ಥಿಗಳ ವರ್ಗಗಳ ಬಗ್ಗೆ ಮಾಹಿತಿ ಒದಗಿಸಿಲ್ಲ ಎಂದು ವಿವಿ ಹೇಳಿಕೊಂಡಿದೆ.

ವೈವಾ ಸಮಯದಲ್ಲಿ ಪಿಎಚ್.ಡಿ ಆಕಾಂಕ್ಷಿಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬುದನ್ನು ಜವಾಹರಲಾಲ್ ನೆಹರ ವಿಶ್ವವಿದ್ಯಾನಿಲಯದ ತಿರಸ್ಕರಿಸಿದೆ. ನ್ಯಾಯಯುತ, ಪಾರದರ್ಶಕ ಮತ್ತು ಅಂತರಿಕ ಪ್ರವೇಶ ನೀತಿಯನ್ನು ಅನುಸರಿಸಲಾಗಿದೆ ಎಂದು ವಿವಿ ಸ್ಪಷ್ಟಪಡಿಸಿದೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ಐಶೆ ಘೋಷ್ ಭಾನುವಾರ ವೈವಾ ವಾಯ್ಸ್ ಗೆ ಹಾಜರಾಗಿದ್ದ ಹಲವು ಅಭ್ಯರ್ಥಿಗಳಿಗೆ ಅತ್ಯಂತ ಕಡಿಮೆ ಅಂಕ ನೀಡಲಾಗಿದೆ ಎಂದು ಆರೋಪಿಸಿದ್ದರು. “ಸಮಾಜದ ಅಂಚಿನಲ್ಲಿರುವ ವರ್ಗಗಳಿಂದ ಪಿಎಚ್‌ಡಿ ಆಕಾಂಕ್ಷಿಗಳ ವಿರುದ್ಧ ತಾರತಮ್ಯ ಮಾಡಿರುವ ಬಗ್ಗೆ ಆರೋಪ ಮಾಡಿದ್ದರು. ಇದನ್ನು ಜೆಎನ್‌ಯು ಸ್ಪಷ್ಟವಾಗಿ ತಿರಸ್ಕರಿಸಿದೆ.

ಪಿಎಚ್‌ಡಿ ಪ್ರವೇಶಕ್ಕಾಗಿ ಜೆಎನ್‌ಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಪ್ರತಿಯೊಬ್ಬ ಎಸ್‌ಸಿ /ಎಸ್‌ಟಿ /ಪಿಡಬ್ಲ್ಯೂಡಿ ಅಭ್ಯರ್ಥಿಯನ್ನು ಆಯಾ ವಿಭಾಗಗಳಲ್ಲಿ ಪ್ರವೇಶಕ್ಕೆ ಲಭ್ಯವಿರುವ ಸೀಟುಗಳ ಸಂಖ್ಯೆಯನ್ನು ಲೆಕ್ಕಿಸದೆ ವೈವಾ ವಾಯ್ಸ್ ಗೆ ಕರೆಯಲಾಗಿದೆ”ಎಂದು ವಿಶ್ವವಿದ್ಯಾಲಯದ ಹೇಳಿಕೆ ತಿಳಿಸಿದೆ.

“ಪ್ರತಿಯೊಬ್ಬ ಅರ್ಹ ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅವಕಾಶವನ್ನು ಒದಗಿಸಲು ವಿಶ್ವವಿದ್ಯಾನಿಲಯ ಕಾಳಜಿ ಮತ್ತು ಬದ್ಧತೆ ಹೊಂದಿದೆ ಎಂದು ಹೇಳಿದೆ.

“ವೈವಾ ವಾಯ್ಸ್ ಅನ್ನು ನಡೆಸುವ ಪಿಎಚ್‌ಡಿ ಆಯ್ಕೆ ಸಮಿತಿಗಳ ಸದಸ್ಯರಿಗೆ ಪಕ್ಷಪಾತ ಮತ್ತು ಪೂರ್ವಾಗ್ರಹ ಮಾಡದಂತೆ ಕ್ರಮ ಕೈಗೊಂಡಿದ್ದು, ಅಭ್ಯರ್ಥಿಗಳ ವರ್ಗಗಳ ಬಗ್ಗೆ ಮಾಹಿತಿ ಒದಗಿಸಿಲ್ಲ ಎಂದು ವಿವಿ ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular