ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಆಗಾಗ್ಗೆ ರೈತರ ಪರ ಹೋರಾಡುತ್ತ ಆ ಸಮುದಾಯದ ಬಗೆಗಿನ ಬದ್ದತೆ ಮತ್ತು ಗೌರವಕ್ಕಾಗಿ ಪಂಜಾಬ್ ರೈತರು ಅತ್ಯುತ್ತಮ ಭತ್ತದ ತಳಿಗಳಲ್ಲಿ ಒಂದಕ್ಕೆ ದೇವೇಗೌಡರ ಹೆಸರನ್ನು ಇಟ್ಟಿರುವುದು ಅವರ ಜೀವನ ಚರಿತ್ರೆ ಹೇಳುತ್ತದೆ.
ದೇವೇಗೌಡರು ಶಾಸಕರಾಗಿ ಮತ್ತು ಸಂಸದರಾಗಿ ಯಾವತ್ತೂ ಸದನದ ಶಿಷ್ಟಾಚಾರ ಉಲ್ಲಂಘಿಸಿಲ್ಲ. ಆದರೆ ಸುದೀರ್ಘ ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ತತ್ವ ಉಲ್ಲಂಘಿಸಿದರು. ಅದು ಅವರ ನಿಷ್ಟಾವಂತ ಕ್ಷೇತ್ರದ ರೈತರ ಕಲ್ಯಾಣಕ್ಕೆ ಬೆದರಿಕೆ ಉಂಟಾಯಿತು ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ಫರ್ರೋಸ್ ಇನ್ ಎ ಫೀಲ್ಡ್: ದಿ ಅನ್ ಎಕ್ಸ್ ಪ್ಲೋರ್ಡ್ ಲೈಫ್ ಆಫ್ ಎಚ್.ಡಿ.ದೇವೇಗೌಡ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಲೋಕಸಭೆಯಲ್ಲಿ ಜುಲೈ 31 ಮತ್ತು ಆಗಸ್ಟ್ 1, 1991 ರ ಘಟನೆಗಳನ್ನು ಉಲ್ಲೇಖಿಸಿ, ಡಾ.ಮನಮೋಹನ್ ಸಿಂಗ್ ಮೊದಲ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಸಬ್ಸಿಡಿ ಕೊನೆಗೊಳಿಸುವ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಗೌಡರು ಸದನದ ಬಾವಿಗೆ ಧಾವಿಸಿ, “ನಾನು ರೈತ ಮತ್ತು ರೈತನ ಮಗ. ನಾನು ಇದಕ್ಕೆ ಅವಕಾಶ ನೀಡುವುದಿಲ್ಲ. ನಾನು ಧರಣಿ ಕೂರುತ್ತೇನೆ. ನಾನು ಈ ಬಾವಿಯಿಂದ ಹೊರಗೆ ಹೋಗುವುದಿಲ್ಲ. ನಾನು ಇದನ್ನು ಪ್ರಚಾರಕ್ಕಾಗಿ ಮಾಡುತ್ತಿಲ್ಲ,” ಎಂದು ಅವರು ಹೇಳಿದರು.
2002 ರಲ್ಲಿ ಭಾರತದಲ್ಲಿ ರೈತರ ಆತ್ಮಹತ್ಯೆಗಳು ವರದಿಯಾದಾಗ, ಗೌಡರು ಕರ್ನಾಟಕದಿಂದ ಸುಮಾರು 2 ಸಾವಿರ ರೈತರ ನಿಯೋಗವನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭೇಟಿ ಮಾಡಿದರು. “ಇದು ಅಭೂತಪೂರ್ವ ಪ್ರತಿಭಟನೆ, ವಿಶೇಷವಾಗಿ ಮಾಜಿ ಪ್ರಧಾನಿಯೊಬ್ಬರು ಈ ರೀತಿಯಲ್ಲಿ ಪ್ರತಿಭಟಿಸಿದ್ದರಿಂದ ದೆಹಲಿಯ ಜನರು ದಿಗ್ಭ್ರಮೆಗೊಂಡರು,”ಎಂದು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದ ಪುಸ್ತಕ ಹೇಳುತ್ತದೆ.
“ರೈತರ ಪರವಾಗಿ ಗೌಡರ ಜೀವಮಾನದಲ್ಲಿ ರೈತ ಸಮುದಾಯದ ಬಗ್ಗೆ ಅವರ ನೀತಿ ಮತ್ತು ಬದ್ದತೆಗಾಗಿ 1996-97ರಲ್ಲಿ ಪಂಜಾಬ್‌ನ ರೈತರು ಭತ್ತದ ಅತ್ಯುತ್ತಮ ತಳಿಗಳಲ್ಲಿ ಒಂದಕ್ಕೆ ದೇವೇಗೌಡ’ ಎಂದು ಹೆಸರಿಸಿದರು. “ ಆ ಭತ್ತದ ತಳಿಯು ಎರಡು ದಶಕಗಳಿಂದ ಬಹಳ ಜನಪ್ರಿಯವಾಗಿತ್ತು ಎಂದು ಜೀವನಚರಿತ್ರೆ ಹೇಳುತ್ತದೆ.