ಏಕದಿನ ನಾಯಕತ್ವದ ಹೆಚ್ಚುವರಿ ಒತ್ತಡವಿಲ್ಲದ ಕ್ರಿಕೆಟಿಗ ವಿರಾಟ್ ಕೋಹ್ಲಿ ಹೆಚ್ಚು ಅಪಾಯಕಾರಿ ಆಟಗಾರ ಎಂದು ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಶೋ ಫಾಲೋ ದಿ ಬ್ಲೂಸ್ ನಲ್ಲಿ ಮಾತನಾಡಿದ ಗೌತಮ್ ಗಂಭೀರ್, ನಾಯಕತ್ವ ಇಲ್ಲದ ವಿರಾಟ್ ಕೋಹ್ಲಿ ಮತ್ತಷ್ಟು ಮುಕ್ತವಾಗಿ ಆಟವಾಡಬಹುದು. ನಾಯಕತ್ವದ ಒತ್ತಡ ಇಲ್ಲದಿರುವುದರಿಂದ ಅವರು ವೈಟ್ ಬಾಲ್ ಕ್ರಿಕೆಟ್ ನಲ್ಲಿ ಹೆಚ್ಚು ಅಪಾಯಕಾರಿಯಾಗಬಹುದು ಎಂದು ತಿಳಿಸಿದ್ದಾರೆ.
ಕೋಹ್ಲಿ ಬಿಳಿ ಬಾಲ್ ಕ್ರಿಕೆಟ್ ನಲ್ಲಿ ಅಥವಾ ಕೆಂಪು ಬಾಲ್ ಕ್ರಿಕೆಟ್ ನಲ್ಲಿ ಹೆಚ್ಚು ರನ್ ಗಳಿಸುತ್ತಿದ್ದಾರೆ. ಹಾಗೆಯೇ ತಂಡಕ್ಕೆ ತಮ್ಮ ಆದ ವಿಭಿನ್ನ ಆಲೋಚನೆ ಮತ್ತು ದೃಷ್ಟಿಕೋನವನ್ನು ಧಾರೆ ಎರೆಯುತ್ತಾರೆ ಎಂದು ಹೇಳಿದರು.
ಕೋಹ್ಲಿ ನಾಯಕರಾಗಿರಲಿ ಅಥವಾ ಇಲ್ಲದಿರಲಿ, ಭಾರತೀಯ ತಂಡದ ಆಟಗಾರನಾಗಿ ಇದುವರೆಗೂ ತೋರಿದ ಉತ್ಸಾಹ ಮತ್ತು ತೀವ್ರತೆ ಒಂದೇ ಆಗಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ರೆಡ್ ಬಾಲ್ ಕ್ರಿಕೆಟ್ ಅಥವಾ ವೈಟ್ ಬಾಲ್ ಕ್ರಿಕೆಟ್ ಯಾವುದೇ ಆಗಿರಲಿ ದೇಶ ವಿರಾಟ್ ಕೋಹ್ಲಿಯ ಅತ್ಯುತ್ತಮ ಆಟವನ್ನು ನಿರೀಕ್ಷಿಸುತ್ತದೆ ಎಂಬ ಖಾತ್ರಿಯಿದೆ. ಹಾಗೆಯೇ ಇಷ್ಟು ದೀರ್ಘ ಕಾಲ ತೋರಿದ ಉತ್ಸಾಹ ಮುಂದೆಯೂ ನೋಡಲಿದ್ದೀರಿ ಎಂದು ತಿಳಿಸಿದರು.
ಕೋಹ್ಲಿ ಭಾರತದ ಅತ್ಯಂತ ಯಶಸ್ವಿ ವೈಟ್ ಬಾಲ್ ನಾಯಕರಲ್ಲಿ ಒಬ್ಬರು. 95 ಏಕದಿನ ಪಂದ್ಯಗಳಲ್ಲಿ 65 ಪಂದ್ಯಗಳನ್ನು ಗೆದ್ದಿದ್ದಾರೆ, 45 ಟ್ವಂಟಿ-20 ಪಂದ್ಯಗಳಲ್ಲಿ ದೇಶವನ್ನು 27 ಬಾರಿ ಗೆಲುವಿನ ದಡ ಮುಟ್ಟಿಸಿದ್ದಾರೆ.
10 ಏಕದಿನ ಪಂದ್ಯ ಮತ್ತು 19 ಟ್ವಿಂಟಿ-20 ಪಂದ್ಯಗಳಿಗೆ ಕೋಹ್ಲಿ ತಂಡದ ನಾಯಕತ್ವ ವಹಿಸಿದ್ದರು. ಕೋಹ್ಲಿ 2017ರಲ್ಲಿ ಸೀಮಿತ ಓವರ್ ಗಳ ನಾಯಕತ್ವವನ್ನು ವಹಿಸಿಕೊಂಡರು. ಅವರ ನಾಯಕತ್ವದಲ್ಲಿ ಭಾರತ ಸೀಮಿತ ಓವರ್ ಗಳ ಸರಣಿಯನ್ನು ಗೆದ್ದಿತು. ಆದರೆ ಐಸಿಸಿ ಪಂದ್ಯಗಳಲ್ಲಿ ಗೆಲುವು ಸಾಧಿಸಲು ವಿಫಲರಾದರು.