ಇಟಲಿಯ ಸಿಸಿಲಿಯನ್ ಪಟ್ಟಣ ರಾವನುಸಾದಲ್ಲಿ ಮೀಥೇನ್ ಅನಿಲ ಸ್ಫೋಟದಲ್ಲಿ ವಸತಿ ಕಟ್ಟಡ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ದಳ ಟ್ವೀಟ್ ಮಾಡಿದೆ.
ಆರ್.ಎಐ ನ್ಯೂಸ್ 24 ಪ್ರಕಾರ ಕಟ್ಟಡದ ಅವಶೇಷಗಳಡಿಯಿಂದ ಇಲ್ಲಿಯವರೆಗೆ ಇಬ್ಬರನ್ನು ಜೀವಂತವಾಗಿ ಹೊರತೆತೆಯಲಾಗಿದೆ ಎಂದು ಅಗ್ನಿಶಾಮಕ ದಳ ತಿಳಿಸಿದೆ.
ದುರಂತ ಸಂಭವಿಸಿದ ವಸತಿ ಕಟ್ಟಡದ ಸುತ್ತಮುತ್ತಲಿನ 50 ಕುಟುಂಬಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಶನಿವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಮೂರು ಕಟ್ಟಡಗಳು ನಾಶವಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಗ್ರಿಜೆಂಟೋ ಆಗ್ನಿಶಾಮಕ ದಳದ ಕಮಾಂಡರ್ ಗೈಸೆಪ್ಪೆ ಮೆರೆಂಡಿನೊ ಪೈಪ್ ಮೂಲಕ ಅನಿಲ ಮಾರ್ಗ ಹಾದುಹೋಗಿದ್ದು ಸ್ಫೋಟಗೊಂಡ ಪರಿಣಾಮ ಮೀಥೇನ್ ಅನಿಲ ವಾತಾವರಣದಲ್ಲಿ ಸೇರಿ ಬೆಂಕಿಯ ಕೆನ್ನಾಲಿಗೆ ಆಕಾಶದತ್ತ ಚಾಚಿರುವುದು ಕಂಡುಬಂದಿದೆ.
ಭೂಕುಸಿತ ಅಥವಾ ಪ್ರತಿಕೂಲ ಹವಾಮಾನದಿಂದ ಸೋರಿಕೆ ಉಂಟಾಗಿರಬಹುದು ಎಂದು ಹೇಳಿದ್ದಾರೆ.