ಚೀನಾ, ಮ್ಯಾನ್ಮಾರ್, ಉತ್ತರ ಕೋರಿಯಾ ಮತ್ತು ಬಾಂಗ್ಲಾದೇಶದೊಂದಿಗೆ ಸಂಬಂಧ ಹೊಂದಿರುವ ಘಟಕಗಳ ಮೇಲೆ ಮಾನವ ಹಕ್ಕುಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಅಮೆರಿಕಾ ವಿಧಿಸಿದೆ. ಜೊತೆಗೆ ಚೀನಾದ ಕೃತಕ ಬುದ್ದಿಮತ್ತೆ ಕಂಪನಿ ಸೆನ್ಸ್ ಟೈಮ್ ಗ್ರೂಪ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದೆ.
ಮ್ಯಾನ್ಮಾರ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ನಿರ್ಬಂಧಗಳನ್ನು ವಿಧಿಸುವ ಅಮೆರಿಕಾದ ಜೊತೆ ಕೆನಡಾ ಮತ್ತು ಯುನೈಟೆಡ್ ಕಿಂಗ್ ಡಮ್ ಸೇರಿಕೊಂಡಿವೆ. ಅಧ್ಯಕ್ಷ ಜೋ ಬಿಡೆನ್ ಆಡಳಿತದಲ್ಲಿ ಉತ್ತರ ಕೊರಿಯಾದ ಮೇಲೆ ಇದೇ ಮೊದಲ ಬಾರಿಗೆ ಹೊಸ ನಿರ್ಬಂಧಗಳನ್ನು ವಿಧಿಸಲಾಗಿದೆ.
ಈ ಕ್ರಮಗಳನ್ನು ಯುನೈಟೆಡ್ ಕಿಂಗ್ ಡಮ್ ಮತ್ತು ಕೆನಡಾ ಸಹಭಾಗಿತ್ವದಲ್ಲಿ ವಿಶ್ವದ ಪ್ರಜಾಪ್ರಭುತ್ವಗಳು ಅಧಿಕಾರ ದುರುಪಯೋಗಪಡಿಸಿಕೊಂಡು ದಬ್ಬಾಳಿಕೆ ನಡೆಸುವವರ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಡೆಯೆಮೊ ಹೇಳಿದರು.
ಶೃಂಗಸಭೆಯಲ್ಲಿ 100ಕ್ಕೂ ಹೆಚ್ಚು ವಿಶ್ವನಾಯಕರು ಮಾಡಿದ ಬದ್ದತೆಗಳು ವಿಶ್ವದಲ್ಲಿ ಹೆಚ್ಚುತ್ತಿರುವ ನಿರಂಕುಶಾಧಿಕಾರ, ಭ್ರಷ್ಟಾಚಾರ ವಿರುದ್ಧ ಹೋರಾಡುತ್ತವೆ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸುತ್ತವೆ ಎಂದು ಬಿಡನ್ ಹೇಳಿದ್ದರು.
ಚೀನಾದ ಕೃತಕ ಬುದ್ಧಿಮತ್ತೆ ಕಂಪನಿಯಾದ ಸೆನ್ಸ್‌ಟೈಮ್ ಅನ್ನು “ಚೀನೀ ಮಿಲಿಟರಿ-ಕೈಗಾರಿಕಾ ಸಂಕೀರ್ಣ ಕಂಪನಿಗಳ” ಪಟ್ಟಿಗೆ ಸೇರಿಸಿದೆ. ಹೀಗಾಗಿ ಅಮೆರಿಕಾ ಹೂಡಿಕೆದಾರರು ಈ ಕಂಪನಿಯಲ್ಲಿ ಹೂಡಿಕೆ ಮಾಡುವುದನ್ನು ನಿಷೇಧಿಸಲಾಗಿದೆ.
ಸೆನ್ಸ್‌ಟೈಮ್ ಅಮೆರಿಕಾದ ಆರೋಪಗಳನ್ನು ಬಲವಾಗಿ ವಿರೋಧಿಸಿದೆ ಮತ್ತು ಆರೋಪಗಳು “ಆಧಾರರಹಿತ” ಎಂದು ಕರೆದಿದೆ.