ನಿರಂಕುಶ ಪ್ರಭುತ್ವಗಳ ಮುಖಾಂತರ ಸಮಾನ ಮನಸ್ಕ ಮಿತ್ರರನ್ನು ಎತ್ತಿಕಟ್ಟು ಉದ್ದೇಶದಿಂದ ಅಮೆರಿಕಾ ಆಯೋಜಿಸಿದ ಶೃಂಗಸಭೆ ಪ್ರಜಾಪ್ರಭುತ್ವವನ್ನು ಸಾಮೂಹಿಕ ವಿನಾಶದ ಆಯುಧವನ್ನಾಗಿ ಬಳಸಿಕೊಳ್ಳಲಾಗಿದೆ ಎಂದು ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.
ಚೀನಾವನ್ನು ಎರಡು ದಿನಗಳ ವರ್ಚುವಲ್ ಶೃಂಗಸಭೆಯಿಂದ ಹೊರಗಿಟ್ಟ ಬಳಿಕ ಚೀನಾ ಆನ್ ಲೈನ್ ನಲ್ಲಿ ಹೇಳಿದೆ.
ಪ್ರಜಾಪ್ರಭುತ್ವ ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡಲು ಅಮೆರಿಕಾ ಬಳಸುವ ಸಾಮೂಹಿಕ ವಿನಾಶದ ಆಯುಧವಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೈದ್ಧಾಂತಿಕ ಪೂರ್ವಗ್ರಹವನ್ನು ಹೊರಿಸಲು ಪ್ರಜಾಪ್ರಭುತ್ವವನ್ನು ಹೊಗಳಲು ಮತ್ತು ಶಸ್ತ್ರಸಜ್ಜಿತಗೊಳಿಸಲು, ವಿಭಜನೆ ಮತ್ತು ದೇಶಗಳ ನಡುವಿನ ಮುಖಾಮುಖಿಯನ್ನು ಪ್ರಚೋದಿಸಲು ಅಮೆರಿಕಾ ಶೃಂಗಸಭೆಯನ್ನು ಆಯೋಜಿಲಾಗಿದೆ ಎಂದು ಹೇಳಿದೆ.
ಬೀಜಿಂಗ್ ಎಲ್ಲಾ ರೀತಿಯ ಹುಸಿ ಪ್ರಜಾಪ್ರಭುತ್ವಗಳನ್ನು ದೃಢವಾಗಿ ವಿರೋಧಿಸಲು ಪ್ರತಿಜ್ಞೆ ಮಾಡಿದೆ. ಇದರೊಂದಿಗೆ ಚೀನಾ ಮತ್ತು ಅಮೆರಿಕಾ ಆರೋಪ-ಪ್ರತ್ಯಾರೋಪ, ಶೀತಲಸಮರ ಮುಂದುವರೆದಿರುವುದು ಇದರಿಂದ ಸ್ಪಷ್ಟವಾಗುತ್ತದೆ.