Friday, November 22, 2024
Google search engine
Homeಮುಖಪುಟಉದಾರೀಕರಣದ ನಂತರ ವಿದ್ಯಾರ್ಥಿ ಸಮುದಾಯದಿಂದ ದೊಡ್ಡ ನಾಯಕರು ಹೊರಹೊಮ್ಮಿಲ್ಲ - ಸಿಜೆಐ ಕಳವಳ

ಉದಾರೀಕರಣದ ನಂತರ ವಿದ್ಯಾರ್ಥಿ ಸಮುದಾಯದಿಂದ ದೊಡ್ಡ ನಾಯಕರು ಹೊರಹೊಮ್ಮಿಲ್ಲ – ಸಿಜೆಐ ಕಳವಳ

ವಿದ್ಯಾರ್ಥಿಗಳು ಮತ್ತು ಯುವಜನರ ಪಾತ್ರ ದಾಖಲಾಗದೆ ಆಧುನಿಕ ಭಾರತದ ಇತಿಹಾಸ ಅಪೂರ್ಣವಾಗಲಿದೆ. ವಿಶ್ವದ ಬಹುತೇಕ ಸಾಮಾಜಿಕ ಕ್ರಾಂತಿಗಳು ಮತ್ತು ಬದಲಾವಣೆಗಳು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಜಾಗೃತಿಯಿಂದ ಆಗಿದೆ. ಹಾಗಾಗಿ ಆಧುನಿಕ ಪ್ರಜಾ ಪ್ರಭುತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆ ಅತ್ಯಗತ್ಯ ಎಂದು ಕರೆ ನೀಡಿದರು.

ಉದಾರೀಕರಣದ ನಂತರ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ವಿದ್ಯಾರ್ಥಿಗಳ ಭಾಗವಹಿಸುವಿಕೆ ಕಡಿಮೆಯಾಗಿದ್ದು ಕಳೆದ ಕೆಲವು ದಶಕಗಳಿಂದ ವಿದ್ಯಾರ್ಥಿ ಸಮುದಾಯದಿಂದ ದೊಡ್ಡಮಟ್ಟದ ನಾಯಕರು ಹೊರಹೊಮ್ಮಿಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಳವಳ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಮತ್ತು ಯುವಜನರ ಪಾತ್ರ ದಾಖಲಾಗದೆ ಆಧುನಿಕ ಭಾರತದ ಇತಿಹಾಸ ಅಪೂರ್ಣವಾಗಲಿದೆ. ವಿಶ್ವದ ಬಹುತೇಕ ಸಾಮಾಜಿಕ ಕ್ರಾಂತಿಗಳು ಮತ್ತು ಬದಲಾವಣೆಗಳು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಜಾಗೃತಿಯಿಂದ ಆಗಿದೆ. ಹಾಗಾಗಿ ಆಧುನಿಕ ಪ್ರಜಾ ಪ್ರಭುತ್ವದಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಿಕೆ ಅತ್ಯಗತ್ಯ ಎಂದು ಕರೆ ನೀಡಿದರು.

ದೇಶದ ರಾಜಕೀಯ ಮತ್ತು ಸಮಾಜೋ-ಆರ್ಥಿಕ ವಾಸ್ತವತೆಗೆ ಯುವ ವಕೀಲರು ಅಪರಿಚಿತರಲ್ಲ. ಹಾಗಾಗಿ ದೇಶದ ಭವಿಷ್ಯಕ್ಕಾಗಿ ಸೇವೆ ಸಲ್ಲಿಸಲು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಳೆದ ಕೆಲವು ದಶಕಗಳಲ್ಲಿ ವಿದ್ಯಾರ್ಥಿ ಸಮುದಾಯದಿಂದ ಯಾವುದೇ ದೊಡ್ಡ ನಾಯಕ ಹೊರಹೊಮ್ಮಿಲ್ಲ ಎಂಬುದನ್ನು ಭಾರತೀಯ ಸಮಾಜದ ಪ್ರಮುಖ ಗಣ್ಯರು ಗಮನಿಸಿದ್ದಾರೆ. ದೇಶದಲ್ಲಿ ಉದಾರೀಕರಣದ ನಂತರ ಸಾಮಾಜಿಕ ಸಮಸ್ಯೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಆಸಕ್ತಿ ಕಡಿಮೆಯಾಗಿದೆ ಎಂದರು.

ಆಧುನಿಕ ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಸಾರ್ವಜನಿಕ ಜೀವನಕ್ಕೆ ಕಾಲಿರಿಸಿ ನಾಯಕರಾಗಿ ಹೊರಹೊಮ್ಮಬೇಕು ಎಂದು ದೆಹಲಿಯ ಕಾನೂನು ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ತಿಳಿಸಿದರು.

ನೀವು ಪ್ರಸ್ತುತ ಚರ್ಚೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯಕ. ನೀವು ಸ್ಪಷ್ಟ ದೃಷ್ಟಿ ಹೊಂದಿರಬೇಕು. ನಿಮ್ಮಂತಹ ಹೆಚ್ಚು ಹೆಚ್ಚು ಅರ್ಥಪೂರ್ಣ, ಮುನ್ನೋಟವುಳ್ಳ ವಿದ್ಯಾರ್ಥಿಗಳು ಸಾರ್ವಜನಿಕ ಜೀವನವನ್ನು ಪ್ರವೇಶಿಸುವುದು ಅತ್ಯಗತ್ಯ. ನೀವು ನಾಯಕರಾಗಿ ಹೊರಹೊಮ್ಮಬೇಕು ಎಂದು ಹೇಳಿದರು.

ರಾಜಕೀಯ ಪ್ರಜ್ಞೆ ಮತ್ತು ಉತ್ತಮ ತಿಳುವಳಿಕೆಯುಳ್ಳ ಚರ್ಚೆಗಳು ನಮ್ಮ ಸಂವಿಧಾನದ ಮೂಲಕ ರಾಷ್ಟ್ರವನ್ನು ಭವ್ಯವಾದ ಭವಿಷ್ಯಕ್ಕೆ ಕರೆದೊಯ್ಯಬಹುದು. ವಕೀಲ ವೃತ್ತಿಯು ಒಂದು ದೊಡ್ಡ ಕರೆಯಾಗಿದೆ ಮತ್ತು ಇದು ಕಲಿತ ಮತ್ತು ಉದಾತ್ತ ವೃತ್ತಿಯಾಗಿದೆ. ಅದು ವ್ಯಾಪಾರ ಅಥವಾ ವ್ಯವಹಾರವಲ್ಲ. ಇವೆರಡರ ನಡುವಿನ ವ್ಯತ್ಯಾಸವು ಆಳವಾದ ಮತ್ತು ಮೂಲಭೂತವಾಗಿದೆ. ವ್ಯವಹಾರದಲ್ಲಿ, ನಿಮ್ಮ ಏಕೈಕ ಉದ್ದೇಶ ಹಣ ಗಳಿಸುವುದು. ವಕೀಲ ವೃತ್ತಿಯಲ್ಲಿ ಹಣ ಸಂಪಾದಿಸುವುದು ಕೇವಲ ಆಕಸ್ಮಿಕ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular