ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಯಾಗಿ ಜೈಲಲ್ಲಿದ್ದ ಹೋರಾಟಗಾರ್ತಿ ಹಾಗೂ ವಕೀಲೆ ಸುಧಾ ಭಾರದ್ವಾಜ್ ಅವರ ಡಿಫಾಲ್ಟ್ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಅಂಗೀಕರಿಸಿದೆ. ಹಾಗಾಗಿ ಸುಧಾ ಅವರನ್ನು ಡಿಸೆಂಬರ್ 8ರಂದು ವಿಶೇಷ ಎನ್ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.
ಸುಧಾ ಅವರನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಹಲವು ಷರತ್ತುಗಳನ್ನು ವಿಧಿಸುವ ಸಾಧ್ಯತೆ ಇದೆ. ಆದರೆ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಸುಧೀರ್ ಧವಳೆ, ಮಹೇಶ್ ರಾವುತ್, ವೆರ್ನಾನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ, ರೋಣಾ ವಿಲ್ಸನ್, ಶೋಮಾ ಸೇನ್, ಸುರೇಂದ್ರ ಗಾಡ್ಲಿಂಗ್ ಮತ್ತು ವರವರ ರಾವ್ ಸೇರಿ ಎಂಟು ಮಂದಿ ಸಹ ಆರೋಪಿಗಳ ಡೀಫಾಲ್ಟ್ ಜಾಮೀನು ಅರ್ಜಿಯನ್ನು ಪೀಠ ತಿರಸ್ಕರಿಸಿತು.
ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಮತ್ತು ಎನ್.ಜೆ. ಜಮಾದಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಪೂರ್ಣಗೊಳಿಸಿದೆ.
ಸುಧಾ ಪರ ವಕೀಲ ಯುಗ್ ಚೌಧರಿ, ಹೈಕೋರ್ಟ್ ರಿಜಿಸ್ಟ್ರಿಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಗಳನ್ನು ಪರಿಶೀಲಿಸಿತು ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ.
2019ರ ಫೆಬ್ರವರಿಯಲ್ಲಿ ಪುಣೆ ಪೊಲೀಸರು ಸಲ್ಲಿಸಿದ ಪೂರಕ ಆರೋಪ ಪಟ್ಟಿಯನ್ನು ತಿಳಿಯಲು ನ್ಯಾಯಾಧೀಶರು ‘ವಿಶೇಷ ನ್ಯಾಯಾಧೀಶರು ಎಂಬ ಅಧಿಕಾರ ಹೊಂದಿಲ್ಲ ಎಂದು ಮನವಿಯಲ್ಲಿ ಆರೋಪಿಸಿದರು. ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿದ ಚೌಧರಿ ‘ ವಿಶೇಷ ನ್ಯಾಯಾಲಯಗಳು ಮಾತ್ರ ವಿಶೇಷ ನ್ಯಾಯವ್ಯಾಪ್ತಿಯನ್ನು ಹೊಂದಿವೆ ಎಂದು ತಿಳಿಸಿದರು.


