ಏರ್ ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ವಿರುದ್ದ ಸಿಬಿಐ ಮತ್ತು ಇಡಿ ಸಲ್ಲಿಸಿರುವ ಚಾರ್ಜ್ ಶೀಟ್ ಗಳನ್ನು ದೆಹಲಿ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಡಿಸೆಂಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರಿಗೆ ಸಮನ್ಸ್ ನೀಡಿದೆ.
ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಚಿದಂಬರಂ ಮತ್ತು ಇತರ ಆರೋಪಿಗಳಿಗೆ ಸಮನ್ಸ್ ನೀಡಲು ಸಾಕಷ್ಟು ಪುರಾವೆಗಳಿವೆ ಎಂದು ಗಮನಿಸಿದ ವಿಶೇಷ ನ್ಯಾಯಾಧೀಶ ಎಂ.ಕೆ.ನಾಗ್ ಪಾಲ್ ಈ ಆದೇಶ ಹೊರಡಿಸಿದ್ದಾರೆ.
ತನಿಖೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಕೋರಿ ಯುನೈಟೆಡ್ ಕಿಂಗ್ ಡಮ್ ಮತ್ತು ಸಿಂಗಾಪುರಕ್ಕೆ ರೋಗೇಟರಿ ಪತ್ರಗಳನ್ನು ಕಳುಹಿಸಲಾಗಿದೆ ಮತ್ತು ಆ ನಿಟ್ಟಿನಲ್ಲಿ ಕೆಲವು ಬೆಳವಣಿಗಗಳಿವೆ ಎಂದು ಸಿಬಿಐ ಮತ್ತು ಇಡಿ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದವು.
ಲೆಟರ್ಸ್ ರೇಗೇಟರಿ ಎನ್ನುವುದು ನ್ಯಾಯಾಲಯದಿಂದ ಕಳುಹಿಸಲಾದ ಬರವಣಿಗೆಯಲ್ಲಿ ಔಪಚಾರಿಕ ಸಂವಹನವಾಗಿದ್ದು ಇದರಲ್ಲಿ ನ್ಯಾಯಾಂಗ ಸಹಾಯವನ್ನು ಕೋರುವ ಕ್ರಮವು ವಿದೇಶಿ ನ್ಯಾಯಾಲಯಕ್ಕೆ ಬಾಕಿ ಉಳಿದಿದೆ.
ಲೆಟರ್ಸ್ ರೊಗೇಟರಿ ಮೂಲಕ ಹುಡುಕುವ ಅತ್ಯಂತ ಸಾಮಾನ್ಯ ಪರಿಹಾರಗಳೆಂದರೆ ಪ್ರಕ್ರಿಯೆಯ ಸೇವೆ ಮತ್ತು ಸಾಕ್ಷ್ಯವನ್ನು ತೆಗೆದುಕೊಳ್ಳುವುದು. ಇಡಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್.ಕೆ.ಮಟ್ಟಾ ಅವರು ವಾದ ಮಂಡಿಸಿದರೆ, ಸಿಬಿಐ ಪರ ವಕೀಲ ನೂರ್ ರಾಂಪಾಲ್ ವಾದ ಮಂಡಿಸಿದ್ದರು.