2108ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅಧಿಕಾರ ವಹಿಸಿಕೊಂಡ ನಂತರ ತೆಲಂಗಾಣದಲ್ಲಿ 67 ಸಾವಿರ ಮಂದಿ ರೈತರು ಸಂಕಷ್ಟದಿಂದ ಮೃತಪಟ್ಟಿದ್ದಾರೆ. ಮೃತ ರೈತರ ಕುಟುಂಬಗಳಿಗೆ ಮುಖ್ಯಮಂತ್ರಿಗಳು ಏನು ಮಾಡಿದ್ದಾರೆ ಎಂದು ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ಮೃತಪಟ್ಟ ರೈತರ ಕುಟುಂಬಗಳಿಗೆ ಕೆಸಿಆರ್ 3 ಲಕ್ಷ ರೂ ಪರಿಹಾರ ಘೋಷಿಸಿದರು. ಆದರೆ ತೆಲಂಗಾಣ ರಾಜ್ಯದಲ್ಲಿ ಸಾವನ್ನಪ್ಪಿರುವ ರೈತರನ್ನು ಕಡೆಗಣಿಸಿದ್ದು ಕೆಸಿಆರ್ ತೆಲಂಗಾಣ ಮತ್ತು ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ದೂರಿದ್ದಾರೆ.
ನವೆಂಬರ್ 27 ಮತ್ತು 28ರಂದು ಇಂದಿರಾ ಪಾರ್ಕ್ ನಲ್ಲಿ ಕಾಂಗ್ರೆಸ್ ಪಕ್ಷ ರೈತರ ಪರ ಹೋರಾಟ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ರೈತರು ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಅವಿಭಜಿತ ಮಹಬೂಬ್ ನಗರ ಅತ್ಯಂತ ಹಿಂದುಳಿದ ಜಿಲ್ಲೆ ಮತ್ತು ವಿಶೇಷವಾಗಿ ಕೊಲ್ಲಾಪುರ ವಿಧಾನಸಭಾ ಕ್ಷೇತ್ರವಾಗಿದೆ. ಕೊಲ್ಲಾಪುರದ ಜನರು ಕುಡಿಯುವ ನೀರಾಗಲಿ, ನೀರಾವರಿಯಾಗಲಿ ಸಿಕ್ಕಿಲ್ಲ. ಜಮೀನು ಸ್ವಾಧೀನಪಡಿಸಿಕೊಂಡ ನಂತರ ರೈತರಿಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿ ಈಗ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.
ಕೃಷಿ ಸಚಿವ ನಿರಂಜನ್ ವಿರುದ್ಧ ವಾಗ್ದಾಳಿ ನಡೆಸಿದ ರೇವಂತ್ ರೆಡ್ಡಿ ಸವಲತ್ತು ಸಿಕ್ಕಾಗ ಮಾತ್ರ ಸಚಿವರು ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಾರೆ. ಕೃಷ್ಣಾ ನದಿ ಪುಷ್ಕರ ಕಾಮಗಾರಿಗೆ ನಿರಂಜನ್ ರೆಡ್ಡಿ ಹಣ ಕಡಿತ ಮಾಡಿದ್ದಾರೆ ಎಂದು ದೂರಿದರು.


