ದೇಶದ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಅಧಾರಶಾಹಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಬುಧವಾರ ತರಾಟೆಗೆ ತೆಗೆದುಕೊಂಡರು
ಅಧಿಕಾರಶಾಹಿ ಜಡಗೊಂಡಿದೆ ಮತ್ತು ಅಧಿಕಾರಿಗಳು ಏನನ್ನೂ ಮಾಡಲು ಬಯಸುವುದಿಲ್ಲ. ವಾಯು ಮಾಲಿನ್ಯ ನಿಯಂತ್ರಣಕ್ಕೆ ಸ್ಪ್ರಿಂಕ್ಲರ್ ಬಳಸುವಂತೆ ನಾವು ಹೇಳಬೇಕಾಗಿದೆ. ಅಧಿಕಾರಿಗಳ ವರ್ತನೆ ಸರಿಯಲ್ಲ ಎಂದು ರಮಣ ಹೇಳಿದರು.
ದೆಹಲಿಯ ವಾಯು ಮಾಲಿನ್ಯದ ಮನವಿಯ ಕುರಿತು ವಾದವನ್ನು ಆಲಿಸುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಅಧಿಕಾರಿಗಳಿಗೆ ಕೆಲವು ಜವಾಬ್ದಾರಿ ಇರಬೇಕು ಮತ್ತು ನ್ಯಾಯಾಂಗ ಆದೇಶದ ಮೂಲಕ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಎನ್.ವಿ.ರಮಣ ಒತ್ತಿ ಹೇಳಿದರು.
ವಾಯು ಮಾಲಿನ್ಯಕ್ಕೆ ವಾಹನವೇ ಮುಖ್ಯ ಕಾರಣ ಎಂದು ನೀವೆಲ್ಲರೂ ಹೇಳುತ್ತೀರಿ. ಆದರೆ ಗ್ಯಾಸ್ ಗಜರ್ಗಳು, ಹೈ-ಫೈ ಕಾರುಗಳು ದೆಹಲಿ ರಸ್ತೆಗಳಲ್ಲಿ ಓಡಾಡುತ್ತಿವೆ. ಇದನ್ನು ತಡೆಯಲು ಅವರನ್ನು ಪ್ರೋತ್ಸಾಹಿಸುವವರು ಯಾರು? ಎಂದು ಪ್ರಶ್ನಿಸಿದರು.
ಪಕ್ಕದ ರಾಜ್ಯಗಳಲ್ಲಿ ವಾಹನಗಳನ್ನು ನಿಷೇಧಿಸುವ ಅಥವಾ ಮನೆಯಿಂದಲೇ ಕೆಲಸ ಜಾರಿಗೊಳಿಸದಿದ್ದರೆ ದೆಹಲಿಯಲ್ಲಿ ಕ್ರಮ ವಹಿಸಿದರೆ ಸಾಲದು. ಸರ್ಕಾರಿ ನಿವಾಸಗಳಲ್ಲಿ ವಾಸಿಸುವ ಕೇಂದ್ರ ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
‘ನಿಮಗೆ ಕಚೇರಿಯಲ್ಲಿ ಎಲ್ಲಾ 100 ಅಧಿಕಾರಿಗಳ ಅಗತ್ಯವಿಲ್ಲ. ಬದಲಿಗೆ ನೀವು 50 ಅಧಿಕಾರಿಗಳನ್ನು ಕರೆದು ಕೆಲಸ ಮಾಡಿಸಬಹುದು ಎಂದು ಕೋರ್ಟ್ ಸಲಹೆ ನೀಡಿದೆ.


