Thursday, January 29, 2026
Google search engine
Homeಮುಖಪುಟನಿರ್ಮಾಣ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗದ ಕಾರ್ಮಿಕರೇ ಅಧಿಕ

ನಿರ್ಮಾಣ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗದ ಕಾರ್ಮಿಕರೇ ಅಧಿಕ

ದೇಶದ ನಿರ್ಮಾಣ ಕ್ಷೇತ್ರದಲ್ಲಿ ಶೇ.70ರಷ್ಟು ಮಂದಿ ದಲಿತರು ಮತ್ತು ಇತರೆ ಹಿಂದುಳಿದ ವರ್ಗದ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಕೆಲಸ ಕಾರ್ಯ ನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರದ ಇ-ಶ್ರಮ ಫೋರ್ಟಲ್ ನಲ್ಲಿ ಆಧಾರ್ ಆಧಾರಿತ ನೋಂದಣಿ ಮಾಡಿಸಿದ್ದಾರೆ ಎಂಬುದನ್ನು ಅಂಕಿಅಂಶಗಳ ಸಹಿತ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಶೇಕಡ 40.5ರಷ್ಟು ಮಂದಿ ಇತರೆ ಹಿಂದುಳಿದ ವರ್ಗದ ಕಾರ್ಮಿಕರು, ಶೇ.27.4ರಷ್ಟು ಸಾಮಾನ್ಯ ವರ್ಗದ ಕಾರ್ಮಿಕರು, ಶೇ.23.7ರಷ್ಟು ಪರಿಶಿಷ್ಟ ಜಾತಿ ಕಾರ್ಮಿಕರು ಮತ್ತು ಶೇ.8.3ರಷ್ಟು ಪರಿಶಿಷ್ಟ ಪಂಗಡದ ಕಾರ್ಮಿಕರು ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಅನೌಪಚಾರಿಕ ವಲಯದ ಕಾರ್ಮಿಕರ ಸಾಮಾಜಿಕ ಹಿನ್ನೆಲೆಯ ಮಹತ್ವವನ್ನು ಅಂದಾಜು ಮಾಡಲಾಗಿದೆ.

2011ರ ಜನಗಣತಿ ಪ್ರಕಾರ, ಪರಿಶಿಷ್ಟ ಜಾತಿ ಜನಸಂಖ್ಯೆಯ ಶೇ.16.2ರಷ್ಟು ಮತ್ತು ಪರಿಶಿಷ್ಟ ಪಂಗಡದ ಶೇ.8.2ರಷ್ಟಿದೆ. ಆದರೆ ಒಬಿಸಿಗಳ ಎಣಿಕೆಯನ್ನು ಜನಗಣತಿಯಲ್ಲಿ ವಿವರಿಸಲಾಗಿತ್ತು.

ರಾಷ್ಟ್ರೀಯ ಮಾದರಿ ಸಮೀಕ್ಷೆ ಸಂಸ್ಥೆ 2007ರ ಸಮೀಕ್ಷೆಯ ಪ್ರಕಾರ ಒಬಿಸಿ ಜನಸಂಖ್ಯೆಯನ್ನು ಶೇ.40.9ಕ್ಕೆ ನಿಗದಿಪಡಿಸಿದೆ. ಸಾಮಾನ್ಯ ವರ್ಗದ ಜನಸಂಖ್ಯೆಯಲ್ಲಿ ಪ್ರತಿಶತ 34ರಷ್ಟು ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ.

ಅನೌಪಚಾರಿಕ ಮತ್ತು ಔಪಚಾರಿಕ ಕೆಲಸ ಮತ್ತು ಉದ್ಯೋಗಗಳ ನಡುವೆಯೂ ಬದಲಾಗುವ ಅನೇಕ ಅಸಂಘಟಿತ ಕಾರ್ಮಿಕರಿದ್ದಾರೆ ಕೃಷಿ ಕಾರ್ಮಿಕರು ವರ್ಷದ ಬೇರೆ ಬೇರೆ ಸಮಯದಲ್ಲಿ ನಿರ್ಮಾಣ ಕೆಲಸಗಾರನಾಗಿಯೂ ಕೆಲಸ ಮಾಡಬಹುದು ಎಂದಿದೆ.

ಪೋರ್ಟಲ್ ನಲ್ಲಿ ಪ್ರಾಥಮಿಕ ಮತ್ತು ದ್ವಿತೀಯಕ ಉದ್ಯೋಗವನ್ನು ಆಧರಿಸಿ ಮಾಹಿತಿ ನೋಂದಾಯಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಅಸಂಘಟಿತ ಕಾರ್ಮಿಕರು ಎರಡು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬರುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ನೋಂದಣಿ ದತ್ತಾಂಶದಂತೆ ಶೇ. 92ರಷ್ಟು ನೋಂದಣಿದಾರರ ಮಾಸಿಕ ಆದಾಯ 10 ಸಾವಿರ ಮತ್ತು ಅದಕ್ಕಿಂತ ಕಡಿಮೆ ಇದೆ. ಶೇ.6ರಷ್ಟು ಮಂದಿ ಆದಾಯ 10 ರಿಂದ 15 ಸಾವಿರ ರೂ ಇದೆ. ಶೇ.1ರಷ್ಟು ಜನರು 15 ರಿಂದ 18 ಸಾವಿರ ರೂ ನಡುವೆ ಆದಾಯ ಹೊಂದಿದ್ದಾರೆ ಎಂದು ಅಂಕಿಅಂಶಗಳು ದೃಢಪಡಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular