Wednesday, December 4, 2024
Google search engine
Homeಮುಖಪುಟರಫೇಲ್ ಹಗರಣ: ಪುರಾವೆ ಇದ್ದರೂ ತನಿಖೆಗೆ ಹೆದರುತ್ತಿರುವ ಪ್ರಧಾನಿ - ಕಾಂಗ್ರೆಸ್ ಆರೋಪ

ರಫೇಲ್ ಹಗರಣ: ಪುರಾವೆ ಇದ್ದರೂ ತನಿಖೆಗೆ ಹೆದರುತ್ತಿರುವ ಪ್ರಧಾನಿ – ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಫೇಲ್ ಹಗರಣದಲ್ಲಿ ನಡೆದಿರುವ ಭ್ರಷ್ಟಾಚಾರ, ಲಂಚ ಮತ್ತು ಒಳಸಂಚನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ರಫೇಲ್ ಹಗರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ಸಾಕಷ್ಟು ಪುರಾವೆಗಳಿದ್ದರೂ ಪ್ರಕರಣ ದಾಖಲಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದಾರೆ.

ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರ ಮೇಲೆ ದಾಳಿ ಮಾಡುವ ಸಿಬಿಐ, ಇಡಿ ಇಲಾಖೆಗಳು ರಫೇಲ್ ಹಗರಣದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದಿಲ್ಲವೇ? ಎಂದು ಕೇಳಿದರು.

ಸುಶೇನ್ ಗುಪ್ತಾ ಅವರನ್ನು ಡಸ್ಸಾಲ್ಟ್ ಸಂಸ್ಥೆ 2000ನೇ ಇಸವಿಯಲ್ಲಿ ನೇಮಕ ಮಾಡಿಕೊಂಡಿತ್ತು. ಆಗಲೇ ಗುಪ್ತಾರಿಗೆ ಹೆಚ್ಚಿನ ಪ್ರಮಾಣದ ಹಣ ಸಂದಾಯ ಮಾಡಲಾಗಿತ್ತು. ಹಾಗೆಂದು ವಾಜಪೇಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಹೇಳುತ್ತಿಲ್ಲ, ಕಾರಣ ಆಗ ಡಸ್ಸಾಲ್ಟ್ ಜೊತೆ ಯಾವುದೇ ಒಪ್ಪಂದ ನಡೆದಿಲ್ಲ.

ಹಾಗೆಯೇ ಯುಪಿಎ ಅವಧಿಯಲ್ಲೂ ಒಪ್ಪಂದಗಳು ನಡೆದಿಲ್ಲ. ಹಣಕಾಸಿನ ವ್ಯವಹಾರವೂ ಆಗಿಲ್ಲ. ಆದರೆ ಮೋದಿ ಸರ್ಕಾರದಲ್ಲಿ ಒಪ್ಪಂದ ಆಗಿದ್ದು ಪ್ರತಿ ಹಂತದಲ್ಲೂ ಮೋದಿ ಹಸ್ತಕ್ಷೇಪ ಮಾಡಿ ಡಸ್ಸಾಲ್ಟ್ ಗೆ ನೆರವು ನೀಡಿದ್ದಾರೆ. ಸುಶೇನ್ ಗುಪ್ತಾ ನಿವಾಸದಲ್ಲಿ ವಶಪಡಿಸಿಕೊಳ್ಳಲಾದ ದಾಖಲೆಗಳು 2015ರ ದಿನಾಂಕವನ್ನು ಹೊಂದಿವೆ. ಆಗ ಮೋದಿ ಸರ್ಕಾರ ಅಧಿಕಾರದಲ್ಲಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯುಪಿಎ ಅವಧಿಯಲ್ಲಿ ಯಾವುದೇ ಒಪ್ಪಂದ ನಡೆದಿರಲಿಲ್ಲ. ಟೆಂಟರ್ ಮಾತ್ರ ಕರೆಯಲಾಗಿತ್ತು. ಡಸ್ಸಾಲ್ಟ್ ಎಲ್ 1 ಆಗಿ ಆಯ್ಕೆ ಆಗಿತ್ತು. ಯುದ್ದ ವಿಮಾನ ಖರೀದಿ ದರವನ್ನು ಕಡಿಮೆ ಮಾಡುವುದರಲ್ಲಿ ಯಶಸ್ವಿಯಾದೆವು. ಯುದ್ದವಿಮಾನದ ತಂತ್ರಾಂಶ ಹಸ್ತಾಂತರಕ್ಕೆ ಒಪ್ಪಿದ್ದೆವು. ಸಹಭಾಗಿ ಸಂಸ್ಥೆಯಾಗಿ ಎಚ್ಎಎಲ್ ಆಯ್ಕೆ ಮಾಡಲಾಗಿತ್ತು ಎಂದು ಹೇಳಿದರು.

ನಂತರದ ಬೆಳವಣಿಗೆಗಳಲ್ಲಿ ಒಂದು ಕಂಪನಿ ಮಧ್ಯವರ್ತಿಗೆ ಹಣ ಪಾವತಿ ಮಾಡುತ್ತದೆ ಅಂದರೆ ಕೇಂದ್ರ ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದರ್ಥ. ಸರ್ಕಾರದಲ್ಲಿರುವವರಿಗೆ ನಿಕಟ ಸಂಪರ್ಕವಿದೆ ಎಂದರ್ಥ. ಹಾಗಾಗಿ ಮಾಜಿ ಸಚಿವ ಅರುಣ್ ಜೇಟ್ಲಿ ಇಲಾಖೆಯ ಗೌಪ್ಯ ದಾಖಲೆಗಳು ಮಧ್ಯವರ್ತಿ ಮನೆಯಲ್ಲಿ ಸಿಗುತ್ತಿರಲಿಲ್ಲ ಎಂದು ತಿಳಿಸಿದರು.

ರಫೇಲ್ ಹಗರಣದಲ್ಲಿ ಕಾಂಗ್ರೆಸ್ ತಪ್ಪು ಮಾಡಿದ್ದರೆ ತನಿಖೆ ಮಾಡಲಿ. ಪ್ರಧಾನಿ ಹೆದರಿಕೊಳ್ಳುವ ಅಗತ್ಯವಾದರೂ ಏನು? ಹಾಗಾದರೆ ತಪ್ಪಿತಸ್ಥರ ಯಾರು? ಹಗರಣ ನಡೆದಿರುವ ದಾಖಲೆಗಳು ಇವೆ. ಜಂಟಿ ಸದನ ಸಮಿತಿ ತನಿಖೆಯಾಗಲಿ ಎಂದು ಆಗ್ರಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular