Friday, September 20, 2024
Google search engine
Homeಮುಖಪುಟಆಫ್ಘಾನಿಸ್ತಾನ: ನಂಗರ್ಹಾರ್ ಮಸೀದಿಯಲ್ಲಿ ಸ್ಫೋಟ - 4 ಮಂದಿ ಸಾವು

ಆಫ್ಘಾನಿಸ್ತಾನ: ನಂಗರ್ಹಾರ್ ಮಸೀದಿಯಲ್ಲಿ ಸ್ಫೋಟ – 4 ಮಂದಿ ಸಾವು

ಆಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಮಸೀದಿಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ನಿವಾಸಿಯೊಬ್ಬರು ತೆಗೆದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮೂರು ಮೃತದೇಹಗಳು ವಿಡಿಯೋದಲ್ಲಿ ಸೆರೆಯಾಗಿವೆ. ಮಸೀದಿಯ ಒಳಭಾಗದಲ್ಲಿ ಗೋಡೆಮಣ್ಣು ಮತ್ತು ಒಡೆದ ಗಾಜುಗಳಿಂದ ತುಂಬಿಹೋಗಿದೆ.

ಪ್ರಾಂತೀಯ ರಾಜಧಾನಿ ಜಲಾಲಾಬಾದ್ ನ ಹೊರಗಿನ ಪರ್ವತ ಸ್ಪಿನ್ ಘರ್ ಪ್ರದೇಶದಲ್ಲಿರುವ ಟ್ರೈಲಿ ಪಟ್ಟಣದ ಮಸೀದಿ ಒಳಗೆ ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಬಂದಿರುವುದನ್ನು ನಂಗರ್ಹಾರ್ ಪ್ರಾಂತ್ಯದ ಸರ್ಕಾರದ ವಕ್ತಾರ ಕ್ವಾರಿ ಹನೀಫ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆಯ ವೇಳೆ ಸುನ್ನಿ ಮಸೀದಿಯಲ್ಲಿ ಬಾಂಬ್ ಸ್ಫೋಟಿಸಿದ್ದು 15 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಐಎಸ್ ಉಗ್ರರು ಈ ಪ್ರಾಂತ್ಯದಲ್ಲಿ ತಾಲಿಬಾನ್ ಹೋರಾಟಗಾರರ ವಿರುದ್ಧ ಪ್ರತಿದಿನ ಗುಂಡಿನ ದಾಳಿ ಮತ್ತು ಬಾಂಬ್ ದಾಳಿ ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿರುವ ಮಸೀದಿಗಳಲ್ಲಿ ಬಾಂಬ್ ಸ್ಫೋಟ್ ಪ್ರಕರಣಗಳು ಸಾಮಾನ್ಯವಾಗಿವೆ. ಇಲ್ಲಿ ಸುನ್ನಿ ಮುಸ್ಲೀಮರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಎಪಿ ನ್ಯೂಸ್ ತಿಳಿಸಿದೆ.

ಆಫ್ಘಾನಿಸ್ತಾನದಲ್ಲಿ ಐದು ವಾರಗಳಲ್ಲಿ ನಡೆದ ಮೂರನೇ ಪ್ರಮುಖ ಮಸೀದಿ ಮೇಲಿನ ಬಾಂಬ್ ದಾಳಿ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular