Friday, November 22, 2024
Google search engine
Homeಮುಖಪುಟರಫೇಲ್ ಒಪ್ಪಂದ: ಮಧ್ಯವರ್ತಿಗೆ 7.5 ಮಿಲಿಯನ್ ಯೂರೋ ಕಮಿಷನ್ ಸಂದಾಯ - ಮೀಡಿಯಪಾರ್ಟ್ ಬಹಿರಂಗ

ರಫೇಲ್ ಒಪ್ಪಂದ: ಮಧ್ಯವರ್ತಿಗೆ 7.5 ಮಿಲಿಯನ್ ಯೂರೋ ಕಮಿಷನ್ ಸಂದಾಯ – ಮೀಡಿಯಪಾರ್ಟ್ ಬಹಿರಂಗ

ಭಾರತದೊಂದಿಗೆ ರಫೇಲ್ ಒಪ್ಪಂದವನ್ನು ಭದ್ರಪಡಿಸಿಕೊಳ್ಳುವುದಕ್ಕೆ ಸಹಾಯ ಮಾಡಲು ಮಧ್ಯವರ್ತಿಯೊಬ್ಬರಿಗೆ ಕನಿಷ್ಠ 7.5 ಮಿಲಿಯನ್ ಯುರೋಗಳನ್ನು ರಹಸ್ಯ ಕಮಿಷನ್ ಗಳಲ್ಲಿ ಪಾವತಿಸಲು ಫ್ರೆಂಚ್ ವಿಮಾನ ತಯಾರಿಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಗೆ ಅನುವು ಮಾಡಿಕೊಟ್ಟು ಬೋಗಸ್ ಇನ್ ವಾಯ್ಸ್ ಗಳನ್ನು ಬಳಸಿ ಹೊಸ ಹಕ್ಕುಗಳನ್ನು ನೀಡಲಾಗಿದೆ ಎಂದು ಫ್ರೆಂಚ್ ತನಿಖಾ ನಿಯತಕಾಲಿಕ ಮೀಡಿಯಪಾರ್ಟ್ ವರದಿ ಮಾಡಿದೆ.

36 ರಫೇಲ್ ಫೈಟರ್ ಜೆಟ್ ಗಳ ಪೂರೈಕೆಗಾಗಿ ಭಾರತದೊಂದಿಗೆ 59,000 ಕೋಟಿ ರೂಪಾಯಿಗಳ ಸರ್ಕಾರಿ ಒಪ್ಪಂದದಲ್ಲಿ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗಿದ್ದು ಅತ್ಯಂತ ಸೂಕ್ಷ್ಮ ನ್ಯಾಯಾಂಗ ತನಿಖೆಯನ್ನು ನಡೆಸಲು ಫ್ರೆಂಚ್ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ ಎಂದು ಮೀಡಿಯಪಾರ್ಟ್ ಜುಲೈನಲ್ಲಿ ವರದಿ ಮಾಡಿತ್ತು.

ಭಾರತಕ್ಕೆ 36 ರಫೇಲ್ ಯುದ್ದ ವಿಮಾನಗಳನ್ನು ಮಾರಾಟ ಮಾಡುವುದಕ್ಕೆ ಸಹಾಯ ಮಾಡಲು ಮಧ್ಯವರ್ತಿಯೊಬ್ಬರಿಗೆ ಕನಿಷ್ಠ 7.5 ಮಿಲಿಯನ್ ಯುರೋಗಳನ್ನು ರಹಸ್ಯ ಕಮಿಷನ್ ಗಳಲ್ಲಿ ಫ್ರೆಂಚ್ ವಿಮಾನ ತಯಾರಕ ಡಸ್ಸಾಲ್ಟ್ ಏವಿಯೇಷನ್ ಗೆ ಸುಳ್ಳು ಇನ್ ವಾಯ್ಸ್ ಗಳನ್ನು ಬಳಸಲಾಗಿದೆ ಮೀಡಿಯಪಾರ್ಟ್ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಈ ದಾಖಲೆಗಳು ಇದ್ದರೂ ಭಾರತೀಯ ತನಿಖಾ ಸಂಸ್ಥೆಗಳು ಈ ವಿಷಯವನ್ನು ಮುಂದುವರಿಸದೇ ಇರಲು ನಿರ್ಧರಿಸಿವೆ ಎಂದು ಅದು ಆರೋಪಿಸಿದೆ.

ಇದು ಕಡಲಾಚೆಯ ಕಂಪನಿಗಳು, ಸಂಶಯಾಸ್ಪದ ಒಪ್ಪಂದಗಳು ಮತ್ತು ಸುಳ್ಳು ಇನ್ ವಾಯ್ಸ್ ಗಳನ್ನು ಒಳಗೊಂಡಿರುತ್ತದೆ. 2018ರಿಂದ ಫ್ರೆಂಚ್ ವಿಮಾನಯಾನ ಸಂಸ್ಥೆ ಡಸ್ಸಾಲ್ಟ್ ಕನಿಷ್ಠ 7.5 ಮಿಲಿಯನ್ ಪಾವತಿಸಿದೆ ಎಂಬುದಕ್ಕೆ ಪುರಾವೆಗಳು ಇವೆ ಎಂದು ಮೀಡಿಯಪಾರ್ಟ್ ಬಹಿರಂಗಪಡಿಸಿದೆ. ಮಧ್ಯವರ್ತಿ ಸುಷೇನ್ ಗುಪ್ತಾಗೆ ರಹಸ್ಯ ಕಮಿಷನ್ ಗಳಲ್ಲಿ ಮಿಲಿಯನ್ ಯುರೋಗಳು ಸಂದಾಯವಾಗಿದೆ ಎಂದು ಮಿಡಿಯಪಾರ್ಟ್ ವರದಿಯಲ್ಲಿ ಹೇಳಿಕೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular