ವಾಣಿಜ್ಯ ಸಿಲಿಂಡರ್ ಗಳಲ್ಲಿ ಬಳಸುವ ದ್ರವೀಕೃತ ಪೆಟ್ರೋಲಿಯಂ ಅನಿಲದ ಬೆಲೆಯನ್ನು ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರ ಪ್ರತಿ ಸಿಲಿಂಡರ್ ಗೆ 266 ರೂಗಳನ್ನು ಹೆಚ್ಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಳದ ಬಳಿಕ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 2000.50 ರೂಗೆ ಏರಿಕೆಯಾಗಿದೆ. ಈ ಹಿಂದೆ 1,734 ರೂ ಇತ್ತು. ದೇಶೀಯ ಎಲ್.ಪಿ.ಜಿ ಸಿಲಿಂಡರ್ ಗಳಲ್ಲಿ ಯಾವುದೇ ಹೆಚ್ಚಳವಿಲ್ಲ ಎಂದು ವರದಿಗಳು ತಿಳಿಸಿವೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ವೆಬ್ ಸೈಟ್ ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ದೆಹಲಿಯಲ್ಲಿ ಸಬ್ಸಿಡಿರಹಿತ 14.2 ಕೆ.ಜಿ ಎಲ್.ಪಿ.ಜಿ. ಸಿಲಿಂಡರ್ ನ ಬೆಲೆ ಪ್ರಸ್ತುತ 899.50 ರೂ ಇದೆ.
ಭಾರತದಲ್ಲಿ ಒಎಂಸಿಗಳು 14.2 ಕೆಜಿ ಸಿಲಿಂಡರ್ ಗಳನ್ನು ಮನೆಗಳಿಗೆ ಮುಕ್ತಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿರುವ ಬೆಲೆಗೆ ಮಾರಾಟ ಮಾಡುತ್ತವೆ. ಆದರೆ ಸರ್ಕಾರ ಪ್ರತಿ ವರ್ಷವೂ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ನೇರ ಲಾಭ ವರ್ಗಾವಣೆಯ ಸಹಾಯದಿಂದ ಪ್ರತಿ ಕುಟುಂಬಕ್ಕೆ 12 ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡುತ್ತಿದೆ ಎಂದು ವರದಿಯಾಗಿದೆ. ಇದು ಸುಳ್ಳು ಎಂದು ಗ್ರಾಹಕರು ತಿಳಿಸಿದ್ದಾರೆ.
ಪ್ರತ್ಯೇಕವಾಗಿ ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್ ಗೆ ತಲಾ 35 ಪೈಸೆಗಳಷ್ಟು ಏರಿಕೆಯಾದ ಕಾರಣ ಪ್ರಮುಖ ಆಟೋ ಇಂಧನ ಬೆಲೆಗಳು ಸೋಮವಾರ ಸಾರ್ವಕಾಲಿಕ ಗರಿಷ್ಟ ಮಟ್ಟವನ್ನು ತಲುಪಿವೆ.


