Monday, December 23, 2024
Google search engine
Homeಚಳುವಳಿಚಳವಳಿಗಳಿಗೆ ಒಳ್ಳೆಯ ಆಂಕರ್ ಬೇಕು - ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರತಿಪಾದನೆ

ಚಳವಳಿಗಳಿಗೆ ಒಳ್ಳೆಯ ಆಂಕರ್ ಬೇಕು – ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಪ್ರತಿಪಾದನೆ

ದೇಶದಲ್ಲಿ ನಡೆಯುತ್ತಿರುವ ಚಳವಳಿಗಳಿಗೆ ಒಳ್ಳೆಯ ಆಂಕರ್ ಬೇಕಾಗಿದೆ. ಚಳವಳಿಗಳೂ ಅಂತಹ ಬಲಿಷ್ಟ ನಾಯಕನ ನಿರೀಕ್ಷೆಯಲ್ಲಿವೆ ಎಂದು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.

ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕಾಡುವ ಕೆ.ಬಿ.ಯ ನೆನಪು ಕಾರ್ಯಕ್ರಮದಲ್ಲಿ ಚಳವಳಿಗಳ ದಿಕ್ಕು ದೆಸೆ ವಿಷಯದ ಕುರಿತು ಅವರು ಮಾತನಾಡಿದರು.

ವರ್ತಮಾನದ ಸ್ಥಿತಿಯನ್ನು ನೋಡಿದರೆ ಭಾರತೀಯ ಸಮಾಜ ಚಳವಳಿ ಮತ್ತು ಪರಿವರ್ತನೆಯನ್ನು ನಿರೀಕ್ಷಿಸುತ್ತಿದೆ. ಇಂತಹ ಸಂದರ್ಭದಲ್ಲಿ ಚಳವಳಿಗಾರರ ನಡುವೆ ಆತ್ಮಾವಲೋಕ ನಡೆಯಬೇಕು. ನಮ್ಮಂಥವರ ನಡುವಿನಿಂದಲೇ ಈ ಅವಲೋಕನ ನಡೆಯಬೇಕು.

ಹಿಂದೆ ನಡೆದ ಚಳವಳಿಗಳೆಲ್ಲವೂ ಏಕವ್ಯಕ್ತಿ ನಾಯಕತ್ವದಲ್ಲೇ ಬೆಳೆದುಬಂದಿವೆ. ಶರಣ ಚಳವಳಿಯ ಬಸವಣ್ಣ, ಸ್ವಾತಂತ್ರ್ಯ ಚಳವಳಿಗೆ ಮಹಾತ್ಮಗಾಂಧಿ, ತುರ್ತುಪರಿಸ್ಥಿತಿ ವಿರೋಧಿ ಚಳವಳಿಗೆ ಜೆಪಿ, ದಲಿತ ಚಳವಳಿಗೆ ಕೃಷ್ಣಪ್ಪ, ರೈತ ಚಳವಳಿಗೆ ನಂಜುಂಡಸ್ವಾಮಿ, ಭ್ರಷ್ಟಚಾರ ವಿರೋಧಿ ಹೋರಾಟಕ್ಕೆ ಅಣ್ಣಾ ಹಜಾರೆ ಆಂಕರ್ ಮಾಡಿದರು. ಇದು ಪ್ರಜಾಪ್ರಭುತ್ವದಲ್ಲಿ ಸರಿಯೋ ತಪ್ಪೊ ಬೇರೆ ಚರ್ಚೆ.

ಆದರೆ ಬಲಿಷ್ಟ ನಾಯಕತ್ವ ಬೇಕು. ಚಳವಳಿಗೆಲ್ಲವೂ ಒಬ್ಬ ನಾಯಕನ ನೇತೃತ್ವದಲ್ಲಿ ನಡೆದಿರುವುದು ನಮ್ಮ ಕಣ್ಣಮುಂದಿದೆ. ಅಂತಹ ಬಲಿಷ್ಟ ನಾಯಕತ್ವವನ್ನು ಸಮಾಜ ಎದುರು ನೋಡುತ್ತಿದೆ. ಸಾಮೂಹಿಕ ನಾಯಕತ್ವ ಸರಿ. ಆದರೆ ಅದು ಯಶಸ್ವಿಯಾಗುತ್ತಿಲ್ಲ. ಹಾಗಾಗಿ ಸ್ಥಳೀಯ ನಾಯಕತ್ವವನ್ನು ಹುಟ್ಟುಹಾಕಬೇಕು ಎಂದು ಪ್ರತಿಪಾದಿಸಿದರು.

ರೈತ ಮತ್ತು ದಲಿತ ಚಳವಳಿಯನ್ನು ಒಗ್ಗೂಡಿಸಲು ಪರಸ್ಪರ ತಿಳುವಳಿಕೆ ಅಗತ್ಯವಿದೆ. ಪ್ಯೂಡಲ್ ಮನಸ್ಥಿತಿಯ ಕೋಮುಗಲಭೆಯಾದಾಗ ನೇತೃತ್ವ ವಹಿಸಿದವರು ಇದೇ ಟಿಕಾಯಿತ್. ಇಂದು ನಾವು ಆತ್ಮಾವಲೋಕನ ಮಾಡಿಕೊಂಡರೆ ಮಾತ್ರ ಬದಲಾವಣೆ ಸಾಧ್ಯ. ದೇವನೂರು ಮಹಾದೇವ ಅವರು ದಲಿತರ ಮನೆಯಲ್ಲಿ ಊಟ ಮಾಡುವವರಿಗೆ ಟಿಕೆಟ್ ನೀಡಬೇಕು ಅಂದಾಗ ರೈತ ಸಂಘ ಇದನ್ನು ಒಪ್ಪಲಿಲ್ಲ.

ಮನುಷ್ಯದ ಪರಿಸರದ ಕೂಸು. ಅಲ್ಲಿಂದಲೇ ಅವರ ವ್ಯಕ್ತಿತ್ವ ರೂಪಿತವಾಗುತ್ತದೆ. ಇವೊತ್ತು ಅಂತಹ ಪರಿಸರ ಇಲ್ಲ. ಯುವಜನರಿಗೆ ತಾತ್ವಕತೆ ಇಲ್ಲ. ದಾರಿ ತಪ್ಪುತ್ತಿದ್ದಾರೆ ಎಂಬುದೆಲ್ಲ ಸರಿ. ಆದರೆ ನಾವು ಮುಂದಿನ ಪೀಳಿಗೆಗೆ ಉತ್ತಮ ಮಾರ್ಗ ತೋರಿಸುವಲ್ಲಿ ವಿಫಲರಾಗಿದ್ದೇವೆ. ರೈತ, ದಲಿತ ಮತ್ತು ಭಾಷಾ ಚಳವಳಿ ಪ್ರಾರಂಭಿಸಬೇಕಾದರೆ ನಮ್ಮ ಮುಂದಿರುವ ಸವಾಲುಗಳೇನು ಎಂಬ ಬಗ್ಗೆ ಚರ್ಚೆ ನಡೆಯಬೇಕು ಎಂದು.

ದಲಿತ ಸಂಘಟನೆಗಳೆಲ್ಲಾ ಒಟ್ಟಾಗಬೇಕಾದ ಅಗತ್ಯವಿಲ್ಲ. ಒಂದು ಮಾಡುತ್ತೇವೆ ಎಂದು ಹೋಗುವುದೇ ದೊಡ್ಡ ಸಮಸ್ಯೆ. ಒಂದು ಮಾಡುವುದಕ್ಕಿಂದ ಕೂಡಿ ಹೋರಾಟ ನಡೆಸುವುದು ಅಗತ್ಯವಿದೆ. ರೈತ ಮತ್ತು ದಲಿತ ಚಳವಳಿಗಳು ಕೈಕೈ ಹಿಡಿದು ಮುಂದೆ ಹೋಗಬೇಕು. ಇದು ಎಲ್ಲಿಯವರೆಗೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಬದಲಾವಣೆ ಸಾಧ್ಯವಿಲ್ಲ.

ಸಾಮಾಜಿಕ ಮತ್ತು ಆರ್ಥಿಕ ಹೋರಾಟವನ್ನು ರೈತ ಚಳವಳಿಯೊಂದಿಗೆ ಅಳವಡಿಸಿಕೊಳ್ಳದಿದ್ದರೆ ಬದಲಾವಣೆ ಮತ್ತು ಸರ್ಕಾರದ ಮೇಲೆ ಒತ್ತಡ ತರಲು ಸಾಧ್ಯವಿಲ್ಲ. ಹಾಗಾಗಿ ರೈತ ಮತ್ತು ದಲಿತ ಚಳವಳಿಗಳು ಒಗ್ಗೂಡಿ ಹೋಗಬೇಕು. ಆದರೆ ಬಹುತೇಕ ಚಳವಳಿಗಳ ಹೋರಾಟಗಾರರಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ದೆಹಲಿಯ ಗಡಿಗಳಲ್ಲಿ ರೈತರು ಚಳವಳಿ ನಡೆಸುತ್ತಿದ್ದಾರೆ. ಅವರೆಲ್ಲರೂ ಭೂಮಾಲಿಕರೇ ಆಗಿದ್ದಾರೆ. ಸಾಮಾನ್ಯ ರೈತರು ಮತ್ತು ಕೂಲಿ ಕಾರ್ಮಿಕರ ಬಗೆಗಿನ ಅವರ ಅಭಿಪ್ರಾಯಗಳು ಭಿನ್ನವಾಗಿದೆ. ಈ ಸಮಸ್ಯೆ ನಿವಾರಿಸಿಕೊಳ್ಳಲು ಭೂಮಾಲಿಕ ರೈತರು ಸಿದ್ದರಿಲ್ಲ. ಹಾಗಾಗಿಯೇ ಬಿಜೆಪಿ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗಿದೆ.

ಚಳವಳಿ ಅಂದರೆ ಒಂದು ಯೋಜನೆ ಅಲ್ಲ. ಅದೊಂದು ಪ್ರಕ್ರಿಯೆ. ಅದು ಒಂದು ರೀತಿ ರೀಲೆ ಓಟ ಇದ್ದಂತೆ. ಮುಂದುವರಿಯುತ್ತ ಹೋಗಬೇಕು. ಕೆ.ಬಿ. ಆಗಲಿ, ಸಿದ್ದಲಿಂಗಯ್ಯ ಆಗಲಿ ಓಡಿದ ಓಟ ವ್ಯರ್ಥವಲ್ಲ. ಅವರು ಎಲ್ಲಿಂದ ಓಟ ನಿಲ್ಲಿಸಿದ್ದಾರೋ ಅಲ್ಲಿಂದ ನಾವು ಓಡಬೇಕಾದ ಅಗತ್ಯವಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular