ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರ ನಾಲ್ಕನೇ ದಿನವೂ ಹೆಚ್ಚಳವಾಗಿದೆ. ಅಕ್ಟೋಬರ್ 30ರಂದು ಪೆಟ್ರೋಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದ್ದು ವಾಹನ ಸವಾರರ ಜೇಬುಗಳು ಖಾಲಿಯಾಗುವಂತೆ ಮಾಡುತ್ತಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 108.99 ರೂಗೆ ತಲುಪಿದೆ. ಡೀಸೆಲ್ ಬೆಲೆ 97.72 ರೂ ಇದೆ.
ಮೆಟ್ರೋ ನಗರಗಳಲ್ಲಿ ಒಂದಾದ ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿ ಪೆಟ್ರೋಲ್ ಬೆಲೆ 114.81ರೂಗೆ ಏರಿಕೆ ಆಗಿದೆ. ಇದು ದೇಶದಲ್ಲೇ ಅತ್ಯಂತ ದಾಖಲೆಯ ಏರಿಕೆಯಾಗಿದೆ. ಡೀಸೆಲ್ ಬೆಲೆ 105.86 ರೂಪಾಯಿಗೆ ಏರಿಕೆಯಾಗಿದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ 109.46 ರೂ ಇದ್ದರೆ, ಡೀಸೆಲ್ 100.84 ರೂ ಇದೆ. ದಕ್ಷಿಣ ಭಾರತದ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 105.74 ರೂಪಾಯಿಗೆ ಹೆಚ್ಚಳವಾಗಿದೆ. ಡೀಸೆಲ್ 101.92 ರೂಪಾಯಿ ಇದೆ.
ಮೌಲ್ಯವರ್ಧಿತ ತೆರಿಗೆ ವಿಧಿಸಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಏರುಪೇರು ಇದೆ.
ಕೇಂದ್ರ ಸರ್ಕಾರ ತೈಲ ರಫ್ತು ದೇಶಗಳೊಂದಿಗೆ ಪೂರೈಕೆ ಮತ್ತು ಬೇಡಿಕೆ ಸಂಬಂಧ ಮಾತುಕತೆ ನಡೆಸಿದ್ದರೂ ಬೆಲೆ ಏರಿಕೆಯ ಬಗ್ಗೆ ಯಾವುದೇ ಪರಿಹಾರ ಸಿಕ್ಕಿಲ್ಲ.