Friday, September 20, 2024
Google search engine
Homeಮುಖಪುಟವಿಶ್ವ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಹಿಂದೆಬಿದ್ದ ಭಾರತ

ವಿಶ್ವ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಹಿಂದೆಬಿದ್ದ ಭಾರತ

ವಿಶ್ವ ಹಸಿವು ಸೂಚ್ಯಂಕ ರ್ಯಾಂಕ್ ನಲ್ಲಿ ಭಾರತ ತೀವ್ರ ಕುಸಿತ ಕಂಡಿದೆ. 2020ರಲ್ಲಿ 94ನೇ ಸ್ಥಾನದಲ್ಲಿದ್ದ ಭಾರತ 2021ನೇ ಸಾಲಿನಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತಲೂ ಹಸಿವು ಸೂಚ್ಯಂಕ ರ್ಯಾಂಕ್ ಪಟ್ಟಿಯಲ್ಲಿ ಭಾರತ ಹಿಂದೆ ಬಿದ್ದಿದೆ.

ವಿಶ್ವದ 116 ದೇಶಗಳ ಹಸಿವು ಸೂಚ್ಯಂಕ ಪಟ್ಟಯಲ್ಲಿ 18 ದೇಶಗಳು ಉನ್ನದ ಸ್ಥಾನವನ್ನು ಹಂಚಿಕೊಂಡಿವೆ. ಚೀನಾ, ಬ್ರೆಜಿಲ್, ಕುವೈತ್ ಅಗ್ರಸ್ಥಾನ ಪಡೆದುಕೊಂಡಿವೆ.

2020ನೇ ಸಾಲಿನಲ್ಲಿ ಭಾರತ ಹಸಿವು ಸೂಚ್ಯಂಕದಲ್ಲಿ 94ನೇ ಸ್ಥಾನದಲ್ಲಿತ್ತು. ಹಿಂದಿನ ವರ್ಷ 107 ರಾಷ್ಟ್ರಗಳು ವಿಶ್ವ ಹಸಿವು ಸೂಚ್ಯಂಕ ಪಟ್ಟಯಲ್ಲಿದ್ದವು. ಈಗ 116 ದೇಶಗಳ ಪಟ್ಟಿಯಲ್ಲಿ ಭಾರತ 101ನೇ ಸ್ಥಾನಕ್ಕೆ ಕುಸಿದಿದ್ದು ಅಪೌಷ್ಠಿಕತೆಯಲ್ಲಿ ಹಿಂದೆ ಬಿದ್ದಿದೆ.

ನೇಪಾಳ 76 ಸ್ಥಾನ, ಬಾಂಗ್ಲಾದೇಶ 76ನೇ ಸ್ಥಾನ, ಮ್ಯಾನಮಾರ್ 71 ಮತ್ತು ಪಾಕಿಸ್ತಾನ 92ನೇ ಸ್ಥಾನದಲ್ಲಿದ್ದು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಈ ದೇಶದಲ್ಲಿ ಬಡತನ ಪ್ರಮಾಣ ಹೆಚ್ಚಾಗಿದ್ದರೂ ಅಪೌಷ್ಟಿಕತೆ ಕಡಿಮೆ ಇದೆ ಎಂಬುದನ್ನು ಸೂಚ್ಯಂಕ ಬೊಟ್ಟು ಮಾಡಿದೆ.

1998-2002ರವರೆಗೆ 17.1ರಷ್ಟು ಇದ್ದ ಮಕ್ಕಳ ಅಪೌಷ್ಠಿಕತೆಯ ಮಟ್ಟ 2016-2020ವರೆಗೆ ಅದು 17.3ಕ್ಕೆ ಏರಿಕೆ ಕಂಡಿದೆ. ಕೊವಿಡ್ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಮಕ್ಕಳಲ್ಲಿ ಸಾಕಷ್ಟು ಅಪೌಷ್ಟಿಕತೆ ಕಂಡುಬಂದಿದೆ. ಕಡಿಮೆ ತೂಕ, ವಯಸ್ಸಿಗಿಂತ ಕಡಿಮೆ ಎತ್ತರ ಇರುವುದು ಹಸಿವು ಸೂಚ್ಯಂಕ ಪಟ್ಟಿಯಲ್ಲಿ ವ್ಯಕ್ತವಾಗಿದೆ.

ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ ಕುಸಿದುಹೋಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪಿಲ್ ಸಿಬಲ್ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸುವ ಮೂಲಕ ವ್ಯಂಗ್ಯ ಮಾಡಿದ್ದಾರೆ.

ಹಸಿವು, ಬಡತನ, ಡಿಜಿಟಲ್ ಆರ್ಥಿಕತೆ ನಿರ್ಮೂಲನೆ ಮಾಡಿರುವುದಕ್ಕೆ ಅಭಿನಂದನೆಗಳು ಮೋದಿಜಿ ಎಂದು ಸಿಬಲ್ ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular