Thursday, September 19, 2024
Google search engine
Homeಮುಖಪುಟತೈವಾನ್ ಬೆಂಕಿ ದುರಂತ - 46 ಮಂದಿ ಸಾವು

ತೈವಾನ್ ಬೆಂಕಿ ದುರಂತ – 46 ಮಂದಿ ಸಾವು

ದಕ್ಷಿಣ ತೈವಾನ್ ಕುವೊಶಿಯು ನಗರದ 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ 46 ಮಂದಿ ಮೃತಪಟ್ಟಿರುವ ಘಟನೆ ಅಕ್ಟೋಬರ್ 14ರಂದು ಮುಂಜಾನೆ ಸಂಭವಿಸಿದೆ. 41 ಮಂದಿ ಜನ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ತಿಳಿಸಿದ್ದಾರೆ.

ಮುಂಜಾನೆ 3 ಗಂಟೆ ಸಮಯದಲ್ಲಿ 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಎಲ್ಲಾ ಅಂತಸ್ತಿಗಳಿಗೂ ಹರಡಿದೆ. ಪರಿಣಾಮ ಹಲವರು ಸಾವನ್ನಪ್ಪಿದರೆ, ಬೆಂಕಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಕಿ ದುರಂತದಲ್ಲಿ ಸುಟ್ಟುಕರಕಲಾದ 11 ಮಂದಿ ಮೃತದೇಹಗಳನ್ನು ನೇರವಾಗಿ ಶವಾಗಾರಕ್ಕೆ ರವಾನಿಸಲಾಯಿತು. ಗಾಯಗೊಂಡ 55 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಚಿಂಗ್ ಸಿಯು ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ನಡೆಸಿದರು. ಕೆಳಅಂತಸ್ತಿನ ಮನೆಗಳಿಗೆ ಬೆಂಕಿಯ ಕೆನ್ನಾಲಿಗೆ ತಗುಲದಂತೆ ನೀರನ್ನು ಸಿಂಪಡಿಸಲಾಗುತ್ತಿದೆ.

ಬೆಂಕಿ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ಈ ಕಟ್ಟಡ 40 ವರ್ಷದಷ್ಟು ಹಳೆಯದಾಗಿದ್ದು ಎಲ್ಲವೂ ಅಸ್ತವ್ಯಸ್ಥವಾಗಿದೆ. ಬೆಂಕಿಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟುಹೋಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. S

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular