Friday, September 20, 2024
Google search engine
Homeಮುಖಪುಟಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ

2021ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಅಕ್ಟೋಬರ್ 11ರಂದು ಘೋಷಣೆಯಾಗಿದೆ. ಕೆನಡಾದ ಡೇವಿಡ್ ಕಾರ್ಡ್, ಇಸ್ರೇಲ್-ಅಮೆರಿಕಾದ ಜೋಶುವ ಆಂಗ್ರಿಸ್ಟ್ ಮತ್ತು ಡಚ್-ಅಮರಿಕದ ಗೈಡೋ ಇಂಬೆನ್ಸ್ ತಜ್ಞರು ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಾರ್ಮಿಕ ಮಾರುಕಟ್ಟೆಯ ಒಳನೋಟ ಮತ್ತು ನೈಸರ್ಗಿಕ ಪ್ರಯೋಗಗಳು ಕುರಿತ ಸಂಶೋಧನೆಗೆ ಈ ಮೂವರು ತಜ್ಞರಿಗೆ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ ಎಂದು ಆಯ್ಕೆ ಸಮಿತಿ ಹೇಳಿದೆ.

ಕಾರ್ಮಿಕ ಮಾರುಕಟಟೆಯ ಹೊಸ ಒಳನೋಟಗಳು ಮತ್ತು ನೈಸರ್ಗಿಕ ಪ್ರಯೋಗಗಳ ಕಾರಣ ಮತ್ತು ಪರಿಣಾಮದ ಕುರಿತು ಈ ಸಂಶೋಧಕರು ಸಾಕಷ್ಟು ಕೆಲಸ ಮಾಡಿದ್ದು ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

ಪ್ರಶಸ್ತಿಯ ಮೊತ್ತ 1.1 ಮಿಲಿಯನ್ ಡಾಲರ್ ಆಗಿದೆ. ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಕಾರ್ಡ್ 1956ರಲ್ಲಿ ಕೆನಡಾದಲ್ಲಿ ಜನಿಸಿದರು. ಕಾರ್ಮಿಕರ ಅರ್ಥಶಾಸ್ತ್ರಕ್ಕೆ ಅವರ ಪ್ರಾಯೋಗಿಕ ಕೊಡುಗೆಗಳು ಸಂಶೋಧನ ಕೃತಿ ರಚಿಸಿದ್ದಾರೆ. ಕಾರ್ಮಿಕರ ಕನಿಷ್ಟ ವೇತನ, ವಲಸೆ ಮತ್ತು ಶಿಕ್ಷಣ ಕಾರ್ಮಿಕರ ಮೇಲೆ ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಕೃತಿಯಲ್ಲಿ ವಿವರಿಸಿದ್ದಾರೆ.

ಇಸ್ರೇಲ್-ಅಮೆರಿಕಾ ಜೋಶುವ ಆಂಗ್ರಿಸ್ಟ್ ಅವರಿಗೆ 61 ವರ್ಷ. ಮಸ್ಸಚುಸೆಟ್ಸ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್. ಗೈಡೋ ಇಂಬೆನ್ಸ್ 58 ವರ್ಷ. ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್. ಇವರು ಖಾಸಗಿ ಸಂಬಂಧಗಳ ವಿಶ್ಲೇಷಣೆ ಮತ್ತು ಕ್ರಮಬದ್ದ ಕೊಡುಗೆ ಕುರಿತು ಸಂಶೋಧನೆ ನಡೆಸಿದ್ದಾರೆ.

ಈ ಇಬ್ಬರು ಅರ್ಥಶಾಸ್ತ್ರದಲ್ಲಿ ಕ್ರಾಂತಿಕಾರಕ ಕೆಲಸ ಮಾಡಿದ್ದಾರೆ. ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಿದ್ದಾರೆ. ಜನರ ಗುಂಪುಗಳ ಮೇಲಿನ ನೈಸರ್ಗಿಕ ಪ್ರಯೋಗಗಳು, ನೀತಿಗಳ ಬದಲಾವಣೆಯ ಫಲಿತಾಂಶ ಕುರಿತು ಸಂಶೋಧನೆ ಕೈಗೊಂಡಿದ್ದಾರೆ ಎಂದು ಆಯ್ಕೆ ಸಮಿತಿ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular