Thursday, September 19, 2024
Google search engine
Homeಮುಖಪುಟಹೈದರಾಬಾದ್ ನಲ್ಲಿ ಭಾರೀ ಮಳೆ - ಜನ ಜೀವನ ಅಸ್ತವ್ಯಸ್ತ - ಮನೆ ತಲುಪಲು ಪರದಾಟ

ಹೈದರಾಬಾದ್ ನಲ್ಲಿ ಭಾರೀ ಮಳೆ – ಜನ ಜೀವನ ಅಸ್ತವ್ಯಸ್ತ – ಮನೆ ತಲುಪಲು ಪರದಾಟ

ಹೈದರಾಬಾದ್ ನಲ್ಲಿ ಭಾರೀ ಮಳೆ ಸುರಿದ ಪರಿಣಾಮ ಜನ ಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಹಳೆಯ ಹೈದರಾಬಾದ್ ನಗರ ಸಂಪೂರ್ಣ ಜಲಾವೃತವಾಗಿದ್ದು ಪ್ರವಾಹದಲ್ಲಿ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ವಾಹನಗಳ ದಟ್ಟಣೆ ಹೆಚ್ಚಾಗಿವುದರಿಂದ ಸವಾರರು ಮನೆಗಳಿಗೆ ತಲುಪಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತ ಗೊಂಡಿದ್ದು ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಕಳೆದ ರಾತ್ರಿ 8.30ಕ್ಕೆ ಆರಂಭವಾದ ಮಳೆ ರಾತ್ರಿ 11 ಗಂಟೆಯವರೆಗೂ ಸುರಿದಿದೆ. ಕೇವಲ ಎರಡೂವರೆ ಗಂಟೆಗಳಲ್ಲಿ 10-12 ಸೆಂಟಿಮೀಟರ್ ಮಳೆಯಾಗಿ ಹೊಸ ದಾಖಲೆ ಸೃಷ್ಟಿಸಿದೆ. ಭಾರೀ ಮಳೆಯ ಕಾರಣದಿಂದ ಪ್ರವಾಹ ಉಂಟಾಗಿ ಬೈಕುಗಳ ನೀರಿನಲ್ಲಿ ಕೊಚ್ಚಿಹೋಗಿವೆ.

ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಜಲಾವೃತ ಪ್ರದೇಶದ ವಾಸಿಗಳು ವಿದ್ಯುತ್ ಇಲ್ಲದೆ, ಮನೆಗಳಿಗೆ ನೀರು ನುಗ್ಗಿರುವುದರಿಂದ ಅಕ್ಷರಶಃ ಏನೂ ಮಾಡಲು ತೋಚದೆ ಸಂಕಟ ಅನುಭವಿಸುತ್ತಿದ್ದಾರೆ. ರಸ್ತೆಗಳು ನೀರಿನಿಂದ ತುಂಬಿಕೊಂಡಿವೆ. ವಾಹನ ಸಂಚಾರ ದಟ್ಟಣೆ ತಪ್ಪಿಸಲು ಪೊಲೀಸರು ಹರಸಾಹಪಡುವಂತೆ ಆಗಿದೆ. ಪಾದಚಾರಿಗಳು ಓಡಾಟಕ್ಕೆ ಕಷ್ಟಪಡುತ್ತಿದ್ದಾರೆ.

ಸಯಾರು ನಗರದಲ್ಲಿ 106 ಮಿಲಿ ಮೀಟರ್ ದಾಖಲೆಯ ಮಳೆಯಾಗಿದೆ. ಸೈರಾಬಾದ್ ನಗರದಲ್ಲಿ 100 ಮಿಲಿ ಮೀಟರ್ ಮಳೆ ಆಗಿದ್ದರೆ ಚಾರ್ಮಿನಾರ್ ನಲ್ಲಿ 86.8 ಮಿ.ಮೀ, ಬಹದ್ದೂರ್ ನಗರದಲ್ಲಿ 81.3 ಮಿ.ಮೀ, ಹಯಾತ್ ನಗರ, ಅಸೀಪ್ ನಗರದಲ್ಲಿ ವ್ಯಾಪಕ ಮಳೆಯಾಗಿದೆ.

ಮಳೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular