ದೇಶದಲ್ಲಿ ಐದು ದಿನಗಳಿಂದಲೂ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಲೇ ಇದೆ. ಅಕ್ಟೋಬರ್ 9ರ ಶನಿವಾರ ಪೆಟ್ರೋಲ್ ಗೆ 30 ಪೈಸೆ ಮತ್ತು ಡಿಸೆಲ್ ಗೆ 35 ಪೈಸೆ ಹೆಚ್ಚಳವಾಗಿ ಹೊಸ ದಾಖಲೆ ಬರೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 103.54 ರೂ ಇದ್ದ ಪ್ರತಿ ಲೀಟರ್ ಪೆಟ್ರೋಲ್ ಈಗ 103.84ಕ್ಕೆ ಏರಿಕೆಯಾಗಿದೆ. ಡಿಸೆಲ್ 35 ಪೈಸೆ ಹೆಚ್ಚಳಗೊಂಡಿದ್ದು ಪ್ರತಿ ಲೀಟರ್ ಡೀಸೆಲ್ 92.12 ರಿಂದ 92,47 ರೂಗೆ ಏರಿಕೆಯಾಗಿದೆ ಭಾರತ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ 110 ರೂಗೆ ಏರಿಕೆಯಾಗಿ ದಾಖಲೆ ಸೃಷ್ಟಿಸಿದೆ. ಅಕ್ಟೋಬರ್ 8ರಂದು 29 ಪೈಸೆ ಹೆಚ್ಚಳ ಮಾಡಿದ್ದರಿಂದ 109.83 ರೂ ಇತ್ತು. ಈಗ ಅದು ಏರಿಕೆ ಕಂಡಿದೆ. 100ರೂ ಇದ್ದ ಪ್ತತಿ ಲೀಟರ್ ಡೀಸೆಲ್ ಬೆಲೆ ಈಗ 100.29 ರೂಗೆ ಏರಿಕೆಯಾಗಿದೆ.
ದೇಶದ ನಾಲ್ಕು ಮೆಟ್ರೋ ನಗರಗಳಲ್ಲಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಏರಿಕೆಯಾಗಿದೆ. ಮೌಲ್ಯವರ್ಧಿತ ತೆರಿಗೆಯಿಂದ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ದೆಹಲಿ ಪೆಟ್ರೋಲ್ -103.84 ರೂ ಡೀಸೆಲ್-92.44
ಮುಂಬೈ 109.83 ರೂ 100.29 ರೂ
ಚೆನ್ನೈ 101.27 ರೂ 96.93 ರೂ
ಕೊಲ್ಲತ್ತ 104.52 ರೂ 95.58 ರೂ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯನ್ನು ಪರಿಗಣಿಸಿ ರಾಜ್ಯದ ಆಯಿಲ್ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯ ಕಂಪನಿಗಳು ದರವನ್ನು ಪ್ರತಿದಿನ ಬೆಳಗ್ಗೆ 6ಗಂಟೆಯಿಂದ ಅನುಷ್ಠಾನಗೊಳಿಸುತ್ತವೆ.