ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಹ್ಮಣ್ಯನ್ ಮೂರು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಶೈಕ್ಷಣಿಕ ಕ್ಷೇತ್ರಕ್ಕೆ ಮರಳು ನಿರ್ಧರಿಸಿದ್ದಾರೆ. ಪತ್ರ ಬರೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಸುಬ್ರಹ್ಮಣ್ಯನ್ ಆರ್ಥಿಕ ಮುಖ್ಯ ಸಲಹೆಗಾರ ಹುದ್ದೆಗೆ ನೇಮಕ ಮಾಡಿದ್ದಕ್ಕಾಗಿ ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
2018ರಲ್ಲಿ ಐಎಸ್.ಬಿ ಹೈದರಾಬಾದ್ ಪ್ರೊಫೆಸರ್ ಸುಬ್ರಹ್ಮಣ್ಯನ್ ಅವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಅರವಿಂದ್ ಸುಬ್ರಹ್ಮಣ್ಯನ್ ಅವರ ಉತ್ತರಾಧಿಕಾರಿಯನ್ನಾಗಿ ಮೋದಿ ಸರ್ಕಾರ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಿತ್ತು.
“ಸರ್ಕಾರದಿಂದ ನನಗೆ ಅದ್ಭುತವಾದ ಪ್ರೋತ್ಸಾಹ ಮತ್ತು ಬೆಂಬಲ ಸಿಕ್ಕಿದೆ. ನನಗೆ ವಹಿಸಿದ ಜವಾಬ್ದಾರಿಗೆ ಸೂಕ್ತ ನ್ಯಾಯವನ್ನು ಒದಗಿಸಿದ್ದೇನೆ. ಈ ಹುದ್ದೆಯ ಮೂರು ವರ್ಷದ ಅವಧಿಯನ್ನು ಪೂರೈಸಿದ ಬಳಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಸಂತೋಷವಾಗುತ್ತದೆ.” ಎಂದು ಪತ್ರದಲ್ಲಿ ಹೇಳಿದ್ದಾರೆ.

ಮೂರು ವರ್ಷಗ ಮೂರು ದಶಕಗಳ ನನ್ನ ವೃತ್ತಿಜೀವನದಲ್ಲಿ ಸ್ಫೂರ್ತಿದಾಯಕ ನಾಯಕರನ್ನು ಎದುರಾಗಿದ್ದೇನೆ. ಆರ್ಥಿಕ ನೀತಿಗಳನ್ನು ಅರ್ಥ ಮಾಡಿಕೊಂಡು ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇನೆ. ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕಠಿಣ ತೀರ್ಮಾನಗಳನ್ನು ಮಾಡಬೇಕಾಗಿ ಬಂತು ಎಂದು ತಿಳಿಸಿದ್ದಾರೆ.
ಕೊರೊನೋತ್ತರ ಭಾರತದ ಆರ್ಥಿಕ ಚಿಂತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಖಾಸಗೀ ವಲಯದ ಸಬಲೀಕರಣದಿಂದ ನೈತಿಕ ಕಲ್ಯಾಣದ ಸೃಷ್ಟಿಯಾಗಿದೆ. ಸರ್ಕಾರದ ಬಂಡವಾಳ ವೆಚ್ಚದಿಂದ ಆರ್ಥಿಕ ಚೇತರಿಕೆಗೆ ಚಾಲನೆ ಸಿಕ್ಕಿದೆ. ಭಾರತದಲ್ಲಿ ನಾಟಕೀಯ ಬದಲಾವಣೆಯಾಗಿದೆ. ನನ್ನ ಕೆಲಸ ತೃಪ್ತಿ ತಂದಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬೆಂಬಲ ಮತ್ತು ಬದ್ದತೆಯಿಂದ ಹಲವು ಬದಲಾವಣೆ ತರಲು ಸಾಧ್ಯವಾಗಿದೆ. ಸ್ನೇಹಿತರಿಂದ ಉತ್ತಮ ಬೆಂಬಲ ವ್ಯಕ್ತವಾಯಿತು. ಹಲವು ಸಲಹೆ ಸೂಚನೆಗಳು ದೊರೆತವು. ನನಗೆ ಉತ್ತಮವಾಗಿ ಕೆಲಸ ಮಾಡಲು ಅನುಕೂಲವಾಯಿತು ಎಂದು ಸ್ಮರಿಸಿದ್ದಾರೆ.


