Monday, September 16, 2024
Google search engine
Homeಮುಖಪುಟಇಬ್ಬರು ಪತ್ರಕರ್ತರಿಗೆ ನೊಬಲ್ ಪ್ರಶಸ್ತಿ ಪ್ರಕಟ

ಇಬ್ಬರು ಪತ್ರಕರ್ತರಿಗೆ ನೊಬಲ್ ಪ್ರಶಸ್ತಿ ಪ್ರಕಟ

ಫಿಲಿಫೈನ್ ಪತ್ರಕರ್ತೆ ಮರಿಯಾ ರೆಸ್ಸಾ ಮತ್ತು ರಷ್ಯನ್ ಪತ್ರಕರ್ತ ಡ್ಮೆಟ್ರಿ ಮುರಟೊರ್ ಅವರಿಗೆ 2021ನೇ ಸಾಲಿನ ನೊಬಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧೈರ್ಯದಿಂದ ಹೋರಾಡಿದಕ್ಕಾಗಿ ಈ ಇಬ್ಬರು ಪತ್ರಕರ್ತರು ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದಾರೆ.

ನಾರ್ವೆಯ ಬೈರಿನ್ ರೆಡ್ ಆಂಡರ್ ಸೆನ್ ಅಧ್ಯಕ್ಷತೆಯ ನೊಬೆಲ್ ಸಮಿತಿ 2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಿದೆ. ಪ್ರತಿಕೂಲ ಪರಿಸ್ಥಿತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಎಲ್ಲ ಪತ್ರಕರ್ತರನ್ನು ಈ ಪ್ರಶಸ್ತಿ ಪ್ರತಿನಿಧಿಸುತ್ತಿದೆ ಎಂದು ಅಂಡರ್ ಸೆನ್ ಹೇಳಿದ್ದಾರೆ.

ಸ್ವೀಡನ್ ಉದ್ಯಮಿ ಆಲ್ಫ್ರೆಡ್ ನೊಬೆಲ್ ನಿಧನರಾದ ಡಿಸೆಂಬರ್ 10ರಂದು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಮರಿಯಾ ರೆಸ್ಸಾ ಮತ್ತು ಡ್ಮೆಟ್ರಿ ಮುರಟೋರ್ “ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ, ಪ್ರಜಾಪ್ರಭುತ್ವ ಮತ್ತು ಶಾಂತಿ ಸ್ಥಾಪನೆಗಾಗಿ ಪೂರ್ವ ಷರತ್ತು ವಿಧಿಸುತ್ತಿದ್ದರು” ಎಂದು ತಿಳಿಸಿದ್ದಾರೆ.

58 ವರ್ಷದ ರೆಸ್ಸಾ ರ್ಯಾಪ್ಲರ್ ಸಂಸ್ಥೆಯ ಸಹಸಂಸ್ಥಾಪಕಿ. ತನಿಖಾ ಪತ್ರಿಕೋದ್ಯಮಕ್ಕಾಗಿ ಸ್ಥಾಪಿಸಿದ ಡಿಜಿಟಲ್ ಮೀಡಿಯಾ ಕಂಪನಿ ಇದಾಗಿದೆ. ಈಗಲೂ ಆ ಸಂಸ್ಥೆಯ ಮುಖ್ಯಸ್ಥೆ. ನೊಬಲ್ ಶಾಂತಿ ಪ್ರಶಸ್ತಿ ಸ್ವೀಕರಿಸುವುದು ಅಚ್ಚರಿಯಾಗಿದೆ ಮತ್ತು ಭಾವನೆಗಳು ಉಕ್ಕಿ ಹರಿಯುವಂತೆ ಮಾಡಿದೆ ಎಂದು ನಾರ್ವೆ ಟಿವಿಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.

ರೆಸ್ಸಾ ಸಿಎನ್ಎನ್ ನ ಮಾಜಿ ಪ್ರತಿನಿಧಿ. ಅಮೆರಿಕ ಪ್ರಜೆ. ಪತ್ರಿಕೋದ್ಯಮದಲ್ಲಿ ಸಾಕಷ್ಟು ಕೆಲಸ ಮಾಡಿದವರು. ಸೈಬರ್ ಪ್ರಕರಣ ಒಂದರಲ್ಲಿ ಜಾಮೀನಿನ ಮೇಲೆ ಹೊರಗೆ ಇದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಮೊರೆಟೊರ ಸ್ವತಂತ್ರ ಪತ್ರಿಕೋದ್ಯಮದ ನೊವಾಯ ಗಜೆಟ್ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರು. ಇವರು ಮಾದಕ ವಿರೋಧಿ ಪ್ರಚಾರಾಂದೋಲನದ ಮೂಲಕ ಗಮನ ಸೆಳೆದವರು. ಡಿಜಿಟಲ್ ಮಾಧ್ಯಮದಲ್ಲಿ ಹೇಗೆ ನಕಲಿ ಸುದ್ದಿಗಳನ್ನು ಹರಡಲಾಗುತ್ತಿದೆ. ವಿರೋಧಿಗಳನ್ನು ಹಿಂಸಿಸಿ ಸಾರ್ವಜನಿಕರ ದಿಕ್ಕು ತಪ್ಪಿಸಲಾಗುತ್ತಿದೆ ಎಂಬುದನ್ನು ಈ ಇಬ್ಬರು ಪ್ರತಿನಿಧಿಸುವ ಸಂಸ್ಥೆಗಳು ಬಯಲಿಗೆಳೆದಿವೆ.

ಮುರಟೊರ್ ಅವರಿಗೆ 59 ವರ್ಷ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಸಮರ್ಥವಾಗಿ ಹೋರಾಡಿದ ಪತ್ರಕರ್ತ. ರಷ್ಯಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಿರಂತರ ಹೋರಾಟ ಮಾಡಿದ್ದು ಇದೀಗ ನೊಬಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular