Friday, October 18, 2024
Google search engine
Homeಮುಖಪುಟಜಾತಿಗಣತಿ ಅಸಾಧ್ಯವೆಂದು ಸುಪ್ರೀಂಕೋರ್ಟ್ ಗೆ ಕೇಂದ್ರದ ಹೇಳಿಕೆ- ಕಾಂಗ್ರೆಸ್, ಆರ್.ಜೆಡಿ ಆಕ್ರೋಶ

ಜಾತಿಗಣತಿ ಅಸಾಧ್ಯವೆಂದು ಸುಪ್ರೀಂಕೋರ್ಟ್ ಗೆ ಕೇಂದ್ರದ ಹೇಳಿಕೆ- ಕಾಂಗ್ರೆಸ್, ಆರ್.ಜೆಡಿ ಆಕ್ರೋಶ

ಜಾತಿಗಣತಿ ಕಾರ್ಯಸಾಧುವಲ್ಲ ಎಂದು ಸುಪ್ರೀಂಕೋರ್ಟ್ ಗೆ ಹೇಳಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ಹಿಂದುಳಿದ ವರ್ಗಗಳನ್ನು ಕೇವಲ ಓಟ್ ಬ್ಯಾಂಕ್ ಗೆ ಮಾತ್ರ ಬಳಸಿಕೊಳ್ಳುತ್ತಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್ ಹಿಂದುಳಿದ ವರ್ಗಗಳನ್ನು ದ್ವೇಷಿಸುತ್ತವೆ ಎಂದು ವಾಗ್ದಾಳಿ ನಡೆಸಿವೆ.

ಜಾತಿಗಣತಿ ಸಾಧ್ಯವಿಲ್ಲ ಎಂಬ ಕೇಂದ್ರದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಾಗಾದರೆ ಇತರೆ ಹಿಂದುಳಿದವರ ಬಗೆಗೆ ಸರ್ಕಾರದ ಬದ್ದತೆ ಏನು? ಸರ್ಕಾರ ಜಾತಿವ್ಯವಸ್ಥೆಯನ್ನು ಶಾಶ್ವತಗೊಳಿಸಲು ಬಯಸುತ್ತಿದೆ ಎಂದು ಟೀಕಿಸಿದೆ.

‘ಅವರಿಗೆ(ಬಿಜೆಪಿ) ವಾಸ್ತವ ಚಿತ್ರಣ ತಿಳಿಯುವುದು ಬೇಕಾಗಿಲ್ಲ. ಜಾತಿರಹಿತ ಸಮಾಜ ಬಿಜೆಪಿಗೆ ಬೇಕಾಗಿಲ್ಲ. ದೇಶದಲ್ಲಿ ಅಸಮಾನತೆ ಮುಂದುವರಿಯುವುದನ್ನು ಅದು ಬಯಸುತ್ತದೆ. ಹಾಗಾಗಿ ಜಾತಿಯ ಚಿತ್ರಣ ಹೊರಬರಬೇಕು ಎಂದು ಏಳು ಸದಸ್ಯರ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೋಯ್ಲಿ ಹೇಳಿದ್ದಾರೆ.

ಜಾತಿವ್ಯವಸ್ಥೆ ಶಾಶ್ವತವಾಗಿ ಇರಬೇಕೆಂದು ಕೇಂದ್ರ ಸರ್ಕಾರ ಬಯಸುತ್ತದೆ. ಅಂತಿಮವಾಗಿ ವೈಜ್ಞಾನಿಕ ಮಾಹಿತಿ ದೊರೆತರೆ, ಕಾಲಕಾಲಕ್ಕೆ ಅದನ್ನು ಪುನರ್ ಪರಿಶೀಲಿಸಿದರೆ, ಈ ಮಾಹಿತಿಯಿಂದ ಸಮಾಜೋ-ಆರ್ಥಿಕ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯಗಳು/ಜಾತಿಗಳು ಭಾಗಿಯಾಗಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

ಆರ್.ಜೆ.ಡಿ. ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಬಿಜೆಪಿ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. “ಆರ್.ಎಸ್.ಎಸ್ ಮತ್ತು ಬಿಜೆಪಿ ಒಬಿಸಿಗಳನ್ನು ದ್ವೇಷಿಸುತ್ತಿವೆ. ಎಲ್ಲಾ ಪಕ್ಷಿಗಳು, ಪ್ರಾಣಿಗಳು ಮತ್ತು ಮರಗಳನ್ನು ಎಣಿಸಬಹುದು. ಆದರೆ ಹಿಂದುಳಿದ ವರ್ಗದ ಜನರನ್ನು ಅಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಆರ್.ಎಸ್.ಎಸ್. ಮತ್ತು ಬಿಜೆಪಿ ಹಿಂದುಳಿದ ವರ್ಗಗಳು ಮತ್ತು ಅತಿಹಿಂದುಳಿದವರನ್ನು ಯಾಕಿಷ್ಟು ದ್ವೇಷಿಸುತ್ತಿವೆ? ಜಾತಿಗಣತಿ ಎಲ್ಲಾ ವರ್ಗಗಳಿಗೂ ಅನುಕೂಲವಾಗಲಿದೆ. ಬಿಜೆಪಿ ಮತ್ತು ಆರ್.ಎಸ್.ಎಸ್. ಹಿಂದುಳಿದವರಿಗೆ ವಂಚಿಸುತ್ತಿವೆ. ಕೇಂದ್ರ ಸರ್ಕಾರ ಗಣತಿಯಲ್ಲಿ ಈ ಕಲಂ ಸೇರಿಸದಿದ್ದರೆ ದೇಶದ ಶೇ.60ರಷ್ಟು ಜನರು ಹೊರಗುಳಿಯುತ್ತಾರೆ. ಹಾಗಾಗಿ ಈ ಸಮುದಾಯದ ಸಂಸದರು, ಸಚಿವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್.ಜೆ.ಡಿ ನಾಯಕ ಮನೋಜ್ ಕುಮಾರ್ ಝಾ ಮಾತನಾಡಿ, 7 ದಶಕದಲ್ಲಿ ಹಿಂದುಳಿದವರು ದೇಶದ ಅಭಿವೃದ್ಧಿಯಲ್ಲಿ ಒಳಗೊಂಡಿರುವುದು ಜಾತಿಗಣತಿಯಿಂದ ಗೊತ್ತಾಗುತ್ತದೆ. ಆದ್ದರಿಂದ ಜಾತಿಗಣತಿ ಅಗತ್ಯ ಎಂದು ಪ್ರತಿಪಾದಿಸಿದರು.

ಬಿಎಸ್.ಪಿ. ನಾಯಕಿ ಮಾಯಾವತಿ ‘ಬಿಜೆಪಿ ಹಿಂದುಳಿದವರನ್ನು ಕೇವಲ ಓಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಇದು ಗಂಭೀರ ವಿಚಾರ. ಆದ್ದರಿಂದ ಜನರು ಎಚ್ಚೆತ್ತುಕೊಳ್ಳಬೇಕು. ಬಿಜೆಪಿ ಹೇಳುವುದಕ್ಕೂ ಕೃತಿಗೂ ಒಂದಕ್ಕೊಂದು ಸಂಬಂಧವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular