Friday, September 20, 2024
Google search engine
Homeಮುಖಪುಟಕಸ್ತೂರಿ ರಂಗನ್ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚನೆ

ಕಸ್ತೂರಿ ರಂಗನ್ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚನೆ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಪಠ್ಯಪುಸ್ತಕ ಪರಿಷ್ಕರಣೆಗಾಗಿ ರಾಷ್ಟ್ರೀಯ ಸಂಚಾಲನಾ ಸಮಿತಿಯನ್ನು ಕೇಂದ್ರ ಸರ್ಕಾರ ರಚನೆ ಮಾಡಿದೆ. ಕರಡು ಮಾರ್ಗದರ್ಶಿ ದಾಖಲೆ ಮತ್ತು ಶಾಲಾ ಪಠ್ಯಪುಸ್ತಕದಲ್ಲಿ ಬದಲಾವಣೆ ತರುವುದು ಈ ಸಮಿತಿಯ ಉದ್ದೇಶವಾಗಿದೆ.

ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ನೇತೃತ್ವದಲ್ಲಿ ಮೂರು ವರ್ಷಗಳ ಅವಧಿಗೆ 12 ಮಂದಿ ಸದಸ್ಯರ ಸಮಿತಿ ರಚನೆ ಮಾಡಿದ್ದು ಕಸ್ತೂರಿ ರಂಗನ್ ಕರಡು ಸಮಿತಿ ಮುಖ್ಯಸ್ಥರಾಗಿದ್ದಾರೆ.

ರಾಷ್ಟ್ರೀಯ ಪಠ್ಯಪುಸ್ತಕ ರಚನೆಯನ್ನು 2005ರಲ್ಲಿ ಪರಿಷ್ಕರಿಸಲಾಗಿತ್ತು. ವಿಶಾಲತಳಹದಿಯಲ್ಲಿ ಶಾಲಾ ಪಠ್ಯಕ್ರಮ, ಪಠ್ಯಪುಸ್ತಕ, ಮಾರ್ಗದರ್ಶಿಸೂತ್ರಗಳನ್ನು ರಚಿಸಲಾಗಿತ್ತು.

ಕಳೆದ ಸೆಪ್ಟೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ-2022 ರಡಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂದು ಹೇಳಿದ್ದರು. ಇಂದು ಕೇಂದ್ರ ಶಿಕ್ಷಣ ಸಚಿವರು ರಾಷ್ಟ್ರೀಯ ಶಿಕ್ಷಣ ನೀತಿಯಡಿ ರಾಷ್ಟ್ರೀಯ ಪಠ್ಯಕ್ರಮ ರಚನೆಯ ಕರಡ ತಯಾರಿಸಲು ಸಮಿತಿ ರಚಿಸಲಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಗ್ರಹಿಕೆ ಆಧಾರದಂತೆ ನಾಲ್ಕು ರಾಷ್ಟ್ರೀಯ ಪಠ್ಯಕ್ರಮ ರಚನೆ ಮಾಡಬೇಕು. ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ರಚನೆ, ಶೈಕ್ಷಣಿಕ ಕಾಳಜಿಗಾಗಿ ರಾಷ್ಟ್ರೀಯ ಪಠ್ಯಕ್ರಮ ರಚನೆ, ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ರಚನೆ, ಹಾಗೂ ವಯಸ್ಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ರಚನೆ ಮಾಡುವಂತೆ ಸೂಚಿನೆ ನೀಡಲಾಗಿದೆ.

ರಾಷ್ಟ್ರೀಯ ಸಂಚಾಲನಾ ಸಮಿತಿಯು ರಾಜ್ಯಗಳ ಪಠ್ಯಕ್ರಮ ರಚನೆಯ ಸಮಿತಿಗಳೊಂದಿಗೆ ಸೇರಿ ನೂತನ ಪಠ್ಯಕ್ರಮವನ್ನು ಪರಿಷ್ಕರಿಸಿ ಕರಡು ವರದಿಯನ್ನು ರಚಿಸಬೇಕು ಎಂದು ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular